×
Ad

ಜು.29: ದ.ಕ.ಜಿಲ್ಲೆಯುಲ್ಲಿ ಯಲ್ಲೊ ಅಲರ್ಟ್‌

Update: 2024-07-28 18:42 IST

ಮಂಗಳೂರು, ಜು.28: ದ.ಕ.ಜಿಲ್ಲೆಯಲ್ಲಿ ರವಿವಾರ ಮಳೆ ಬಿಡುವು ಪಡೆದುಕೊಂಡಿದೆ. ದಿನವಿಡೀ ಮೋಡ, ಬಿಸಿಲಿನ ವಾತಾವರಣವಿದ್ದು, ಸಂಜೆಯ ವೇಳೆ ತುಸು ಮಳೆಯಾಗಿದೆ. ಶನಿವಾರ ರಾತ್ರಿ ನಗರದಾದ್ಯಂತ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಬಳ್ಳಾಲ್ ಬಾಗ್ ಶೆಟ್ಟಿಗಾರ್ ಕಾಂಪೌಂಡ್‌ನ ಭವಾನಿ ಶಂಕರ್‌ರ ಮನೆ ಮೇಲೆ ಮರ ಬಿದ್ದು ತೀವ್ರ ಹಾನಿಯಾಗಿದೆ.

ಭಾರತೀಯ ಹವಾಮಾನ ಇಲಾಖೆಯು ಜು.29ರಂದು ಯಲ್ಲೊ ಅಲರ್ಟ್‌ ಘೋಷಿಸಿದೆ. ಜಿಲ್ಲೆಯಲ್ಲಿ ರವಿವಾರ 28.7 ಡಿ.ಸೆ ಗರಿಷ್ಟ, 22.3ಡಿ.ಸೆ ಕನಿಷ್ಟ ಉಷ್ಟಾಂಶ ದಾಖಲಾಗಿದೆ. ಜಿಲ್ಲೆಯಲ್ಲಿ ಗಂಟೆಗೆ 40ಕಿ.ಮೀ ನಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ.

ರವಿವಾರ ಬೆಳಗ್ಗಿನವರೆಗೆ ಬೆಳ್ತಂಗಡಿಯಲ್ಲಿ ಗರಿಷ್ಠ 43.3 ಮಿಮೀ ಮಳೆ ದಾಖಲಾಗಿದೆ. ಬಂಟ್ವಾಳ 34.6 ಮಿಮೀ, ಮಂಗಳೂರು 28.6 ಮಿಮೀ, ಪುತ್ತೂರು 43.4 ಮಿಮೀ, ಸುಳ್ಯ 38.6 ಮಿಮೀ, ಮೂಡುಬಿದಿರೆ 36 ಮಿಮೀ, ಕಡಬ 43.9 ಮಿಮೀ, ಮೂಲ್ಕಿ 28.6 ಮಿಮೀ, ಉಳ್ಳಾಲ 30.3 ಮಿಮೀ ಮಳೆಯಾಗಿದೆ. ಜಿಲ್ಲೆಯ ದಿನದ ಸರಾಸರಿ ಮಳೆ 40.2 ಮಿಮೀ ಆಗಿದೆ. ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರ ನದಿಯು 27.4 ಮೀಟರ್ ಹಾಗೂ ಬಂಟ್ವಾಳ ನೇತ್ರಾವತಿ ನದಿಯು 7.1 ಮೀಟರ್‌ನಲ್ಲಿ ಹರಿಯುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News