ಡಿ.29-31: ಮುಕ್ವೆ ಮಸ್ಜಿದ್‍ನಲ್ಲಿ ಧಾರ್ಮಿಕ ಮತಪ್ರವಚನ- ನಹ್‍ತೇ ಶರೀಫ್ ಕಾರ್ಯಕ್ರಮ
ಪುತ್ತೂರು; ತಾಲೂಕಿನ ನರಿಮೊಗರು ಗ್ರಾಮದ ಮುಕ್ವೆ ರಹ್ಮಾನಿಯಾ ಜುಮಾ ಮಸೀದಿಯ ನೂತನ ಮದ್ರಸ ಕಟ್ಟಡ ನಿರ್ಮಾಣದ ಅಂಗವಾಗಿ ಡಿ.29ರಿಂದ 31ರ ತನಕ 3 ದಿನಗಳ ಧಾರ್ಮಿಕ ಮತ ಪ್ರವಚನ ಹಾಗೂ ನಹ್‍ತೇ ಶರೀಫ್ (ಕವಾಲಿ) ಕಾರ್ಯಕ್ರಮ ನಡೆಯಲಿದೆ ಎಂದು ರಹ್ಮಾನಿಯಾ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಮುಲಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ತಿಳಿಸಿದ್ದಾರೆ.
ಅವರು ಗುರುವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಡಿ.29ರಂದು ರಾತ್ರಿ ಧಾರ್ಮಿಕ ಮತ ಪ್ರವಚನ ಆರಂಭವಾಗಲಿದ್ದು, ಸಮಸ್ತ ಕೇಂದ್ರ ಮುಶಾವರ ಸದಸ್ಯ ಉಸ್ಮಾನದ ಫೈಝಿ ತೋಡಾರು ದುಆ ನೆರವೇರಿ ಸಲಿದ್ದಾರೆ. ಸಯ್ಯದ್ ಎನ್.ಪಿ.ಎಂ ಶರಪುದ್ದೀನ್ ತಂಞಳ್ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಪ್ರಭಾಷಣಕಾರರಾಗಿ ಅನ್ವರ್ ಆಲಿ ದಾರಿಮಿ ಅಜ್ಜಾವರ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಕ್ವೆ ಮಸ್ಜಿದ್ ಅಧ್ಯಕ್ಷ ಇಬ್ರಾಹಿಂ ಮುಲಾರ್ ವಹಿಸಲಿದ್ದಾರೆ. ಬಳಿಕ ಮಹಮ್ಮದ್ ನಬೀಲ್ ರಝ ಬರ್ಕಾತಿ ನೇತೃತ್ವದಲ್ಲಿ ನಹ್‍ತೇ ಶರೀಫ್ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಿಧಾನಸಭಾ ಅದ್ಯಕ್ಷ ಯು.ಟಿ.ಖಾದರ್ ಭಾಗವಹಿಸಲಿದ್ದಾರೆ. ಡಿ.30 ರಂದು ನೌಫಾಲದ ಕಳಸ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ರಾಜೀವ್ ಗಾಂಧಿ ಯುನಿವರ್ಸಿಟಿಯ ಸಿಂಡಿಕೇಟ್ ಸದಸ್ಯ ಯು.ಟಿ. ಇಫ್ತಿಕಾರ್, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಭಾಗಿಯಾಗಲಿದ್ದಾರೆ. ಡಿ.31ರಂದು ಸಮಾರೋಪ ನಡೆಯ ಲಿದ್ದು, ಹುಸೈನ್ ದಾರಿಮಿ ರೆಂಜಲಾಡಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಸ್ವಾಗತ ಸಮಿತಿ ಅಧ್ಯಕ್ಷ ಅಶ್ರಫ್ ಗ್ಯಾಲಕ್ಸಿ ಚಿಕ್ಕಾಲ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಪ್ರಭಾಷಣಕಾರರಾಗಿ ಎ.ಎಂ. ನೌಶಾದ್ ಬಾಖವಿ ಕೇರಳ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸ್ವಾಗತ ಸಮಿತಿ ಉಪಾಧ್ಯಕ್ಷ ರಫೀಕ್ ಮಣಿಯ, ಪ್ರಚಾರ ಸಮಿತಿ ಪ್ರಧಾನ ಕಾರ್ಯದರ್ಶಿ ಶಿಯಾಬು ದ್ದೀನ್, ಪ್ರಚಾರ ಸಮಿತಿ ಉಸ್ತುವಾರಿ ಪಿ.ಎಂ. ಅಶ್ರಫ್ ಮುಕ್ವೆ ಹಾಗೂ ಸದಸ್ಯ ಸಿದ್ದೀಕ್ ಚಿಕ್ಕಾಲ ಉಪಸ್ಥಿತರಿದ್ದರು.