ಆ.3ರಂದು ಕಣಚೂರು ಆಸ್ಪತ್ರೆಯಲ್ಲಿ ಕಾರ್ಯಾಗಾರ
ಉಳ್ಳಾಲ: ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗ, ಕರ್ನಾಟಕ ಚಾಪ್ಟರ್ ಆಫ್ ಅಬ್ಸ್ಟೆಟ್ರಿಕ್ಸ್ ಆಂಡ್ ಗೈನಕಾಲಜಿ ಮತ್ತು ಅಬ್ಸ್ಟೆಟ್ರಿಕ್ಸ್ ಆಂಡ್ ಗೈನಕಾಲಜಿ ಸೊಸೈಟಿಯ ಸಹಯೋಗದೊಂದಿಗೆ 'ಪ್ಯೂಜರ್ ಇನ್ ಫೋಕಸ್ : ಜೆನೆಟಿಕ್ ಆಂಡ್ ರಿಜನರೆಟಿವ್ ಥೆರಪಿಸಿ ರಿಡಿಪೈಂಡ್' ಎಂಬ ವಿಷಯದ ಬಗ್ಗೆ ಕಾರ್ಯಾಗಾರವು ಆ.3ರಂದು ಕಣಚೂರು ಆಸ್ಪತ್ರೆಯ ಕಾನ್ಫರೆನ್ಸ್ ಡ್ರೊಮ್ ನಲ್ಲಿ ನಡೆಯಲಿದೆ ಎಂದು ಕಣಚೂರು ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದ ಮುಖ್ಯಸ್ಥೆ ಡಾ.ರೇಖಾಲತಾ ಹೇಳಿದ್ದಾರೆ.
ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಈ ಕಾರ್ಯಕ್ರಮವು ಜನನಶಾಸ್ತ್ರ(ಜೆನೆಟಿಕ್) ಮತ್ತು ಪುನರ್ ಉತ್ಪಾದನೆ( ರಿಜನರೆಟಿವ್ ಥೆರಪಿಸ್) ನ ಇತ್ತೀಚಿನ ಪ್ರಗತಿಗಳನ್ನು ಪ್ರಸುತಪಡಿಸುತ್ತಿದ್ದು, ಅವುಗಳ ಪ್ರಯೋಗಾತ್ಮಕ ಬಳಕೆಯನ್ನು ಪ್ರಸಕ್ತ ವೈದ್ಯಕೀಯ ಅಭ್ಯಾಸದಲ್ಲಿ ಹೇಗೆ ಅಳಪಡಿಸಬಹುದು ಎಂಬುದರ ಬಗ್ಗೆ ಚರ್ಚೆ ನಡೆಯಲಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ದೀಪಾ ಭಟ್ 'ಪ್ರಸೂತಿ ಮತ್ತು ಸ್ತ್ರೀ ರೋಗ ಚಿಕಿತ್ಸಾ ಅಭ್ಯಾಸ(ಒಬಿಜಿನ್ ಪ್ರಾಕ್ಟಿಸ್ )'ದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಡಾ.ಫಿಯೋನ ಡಿಸೋಜ 'ಪಿಜಿಡಿ: ವಾಟ್ ಇಸ್ ನ್ಯೂ?' ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಡಾ.ಯೋಗಿತಾ ರಾವ್ ಮುದ್ರಡ್ಡಿ 'ಸ್ತ್ರೀ ರೋಗ ವೈದ್ಯಕೀಯದಲ್ಲಿ ಪುನರ್ ಜನನ ಚಿಕಿತ್ಸೆ' ಕುರಿತು ಉಪನ್ಯಾಸ ಹಾಗೂ ವಾಸ್ತವಿಕ ಬಳಕೆ ಮತ್ತು ಫಲಿತಾಂಶಗಳ ಬಗ್ಗೆ ವಿವರವಾಗಿ ಚರ್ಚಿಸಲಿದ್ದಾರೆ.
ಮಧ್ಯಾಹ್ನದ ನಂತರ ಗರ್ಭಕಾಲದ ಔಷಧ ವಿಜ್ಞಾನ ಮತ್ತು ಎನ್ ಐಪಿಟಿ(ನಾನ್ - ಇನ್ವೆಸಿವ್ ಪ್ರಿನಾಟಲ್ ಟೆಸ್ಟಿಂಗ್)ನ ಇತ್ತೀಚಿನ ಅಭಿವೃದ್ಧಿಗಳ ಬಗ್ಗೆ ಡಾ.ಫಿಯೋನಾ ಡಿಸೋಜ ಹಾಗೂ ಸೋನಿಯಾ ಮಂಡಪ್ಪರ ನೇತೃತ್ವದಲ್ಲಿ ಚರ್ಚೆ ನಡೆಯಲಿದ್ದು, ಇದರಲ್ಲಿ ಅನೇಕ ವೈದ್ಯರು ಭಾಗವಹಿಸಲಿದ್ದಾರೆ. ಒಬಿಜಿನ್ ಅಭ್ಯಾಸದಲ್ಲಿ ಜನನ ಶಾಸ್ತ್ರದ ಕುರಿತು ಕ್ವಿಝ್ ಸ್ಪರ್ಧೆ ನಡೆಯಲಿದೆ ಎಂದರು
ಸುದ್ದಿಗೋಷ್ಠಿಯಲ್ಲಿ ಘಟಕದ ಮುಖ್ಯಸ್ಥೆ ಡಾ.ಜಮೀಳಾ ಸಿ., ಅಸೋಸಿಯೇಟ್ ಪ್ರೊ.ಕೀರ್ತಿ ಕ್ಯಾಲಕೊಂಡ, ಅಸಿಸ್ಟೆಂಟ್ ಪ್ರೊ.ಅಪೇಕ್ಷಾ ಕೃಷ್ಣರಾಜ, ಡಾ.ಶೃತಿ ಎ ಸಿನಿಯರ್ ರೆಸಿಡೆಂಟ್ ಡಾ. ದೀಪಿಕಾ ಕಾಮತ್ ಉಪಸ್ಥಿತರಿದ್ದರು.