×
Ad

ಜು.3-5: ಅತಿಥಿ ಉಪನ್ಯಾಸಕರ ಸಂದರ್ಶನ

Update: 2025-07-01 20:34 IST

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳಿಗೆ ಅಗತ್ಯವಿರುವ ಪದವಿ ಮಟ್ಟದ (ಯುಜಿ) ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಸಂದರ್ಶನವು ಕೊಣಾಜೆಯ ಮಂಗಳ ಗಂಗೋತ್ರಿ ವಿಶ್ವವಿದ್ಯಾನಿಲಯದ ಆಡಳಿತ ಸೌಧದ ಸಿಂಡಿಕೇಟು ಸಭಾಂಗಣದಲ್ಲಿ ಜು.3, 4 ಮತ್ತು 5ರಂದು ನಡೆಯಲಿದೆ.

*ವಿಷಯವಾರು ಸಂದರ್ಶನದ ದಿನಾಂಕ ಮತ್ತು ಸಮಯ: ಜು.3ರ ಬೆಳಗ್ಗೆ 10ರಿಂದ 11:45ರವರೆಗೆ ಕನ್ನಡ, 11:45ರಿಂದ ಮಧ್ಯಾಹ್ನ 1ರವರೆಗೆ ಇಂಗ್ಲಿಷ್, 1ರಿಂದ 1:30ರವರೆಗೆ ಹಿಂದಿ, 2:30ರಿಂದ 2:45ರವರೆಗೆ ಸಂಸ್ಕೃತ, 2:45ರಿಂದ 3:45ರವರೆಗೆ ಇತಿಹಾಸ, 3:45ರಿಂದ 5:30ರವರೆಗೆ ಅರ್ಥಶಾಸ್ತ್ರ.

ಜುಲೈ 4ರಂದು ಬೆಳಗ್ಗೆ 10ರಿಂದ 11:45ರವರೆಗೆ ರಾಜ್ಯಶಾಸ್ತ್ರ, 11:45ರಿಂದ 11:50ರವರೆಗೆ ಸಮಾಜ ಶಾಸ್ತ್ರ, 11:50ರಿಂದ 12:30ರವರೆಗೆ ಭೂಗೋಳಶಾಸ್ತ್ರ, 12:30ರಿಂದ ಮಧ್ಯಾಹ್ನ 1ರವರೆಗೆ ಪತ್ರಿಕೋದ್ಯಮ, 1ರಿಂದ 1:30ರವರೆಗೆ ದೈಹಿಕ ಶಿಕ್ಷಣ/ಕ್ರೀಡೆ, 2:30ರಿಂದ ಅಪರಾಹ್ನ 3ರವರೆಗೆ ಕಂಪ್ಯೂಟರ್ ಸೈನ್ಸ್/ಬಿಸಿಎ, 3ರಿಂದ 3:10ರವರೆಗೆ ಫಿಸಿಕ್ಸ್ , 3:10ರಿಂದ ಸಂಜೆ 4ರವರೆಗೆ ಕೆಮಿಸ್ಟ್ರಿ, 4ರಿಂದ 4:30ರವರೆಗೆ ಮ್ಯಾತ್‌ಮ್ಯಾಟಿಕ್ಸ್, 4:30ರಿಂದ 5ರವರೆಗೆ ಬಾಟನಿ, 5ರಿಂದ 5:10ರವರೆಗೆ ಪ್ರಾಣಿಶಾಸ್ತ್ರ, 5:10ರಿಂದ 5:30ರವರೆಗೆ ಮೈಕ್ರೋ ಬಯಾಲಜಿ.

ಜು.5ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1:30ರವರೆಗೆ ವಾಣಿಜ್ಯ ಮತ್ತು ಮ್ಯಾನೇಜ್ಮೆಂಟ್, 2:30ರಿಂದ 3:30ರವರೆಗೆ ಬಿಬಿಎ (ಟ್ರಾವೆಲ್ ಟೂರಿಸಂ).

ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಕಡ್ಡಾಯವಾಗಿ ಎಲ್ಲಾ ಮೂಲ ದಾಖಲೆಗಳೊಂದಿಗೆ ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಹಾಜರಾಗಬೇಕು. ಪೂರ್ಣಕಾಲಿಕ ಬೋಧನಾ ಅವಧಿ ಯನ್ನು ಕಲಾ ಮತ್ತು ವಾಣಿಜ್ಯ ನಿಕಾಯಕ್ಕೆ ವಾರಕ್ಕೆ 16 ಗಂಟೆ ಹಾಗೂ ವಿಜ್ಞಾನ ನಿಕಾಯಕ್ಕೆ 20 ಗಂಟೆ ಎಂದು ಪರಿಗಣಿಸಲಾಗುತ್ತದೆ. ಪೂರ್ಣಕಾಲಿಕ ಬೋಧನಾ ಅವಧಿಯಿದ್ದಲ್ಲಿ ಮಾಸಿಕ ಗರಿಷ್ಠ 40,000 ರೂ. (ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ ಮಾತ್ರ) ಮತ್ತು ಯು.ಜಿ.ಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದದವರಿಗೆ ಮಾಸಿಕ ಗರಿಷ್ಟ 35,000 ರೂ. ಸಂಭಾವನೆ ಪಾವತಿ ಮಾಡಲಾಗುತ್ತದೆ.

ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ ಕಲಾ ಮತ್ತು ವಾಣಿಜ್ಯ ನಿಕಾಯಕ್ಕೆ 16 ಗಂಟೆಗಿಂತ ಕಡಿಮೆ ಕಾರ್ಯಭಾರ/ ವಿಜ್ಞಾನ ನಿಕಾಯಕ್ಕೆ 20 ಗಂಟೆಗಿಂತ ಕಡಿಮೆ ಕಾರ್ಯಭಾರ ಇದ್ದಲ್ಲಿ ಪ್ರತಿ ಗಂಟೆಯ ’ಬೋಧನಾ ಅವಧಿಗೆ 650 ರೂ.ರಂತೆ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದದವರಿಗೆ ಕಲಾ ಮತ್ತು ವಾಣಿಜ್ಯ ನಿಕಾಯಕ್ಕೆ 16 ಗಂಟೆಗಿಂತ ಕಡಿಮೆ ಕಾರ್ಯಭಾರ/ ವಿಜ್ಞಾನ ನಿಕಾಯಕ್ಕೆ 20 ಗಂಟೆಗಿಂತ ಕಡಿಮೆ ಕಾರ್ಯಭಾರ ಇದ್ದಲ್ಲಿ ಪ್ರತಿ ಗಂಟೆಯ ಬೋಧನಾ ಅವಧಿಗೆ 600 ರೂ. ರಂತೆ ಸಂಭಾವನೆ ಪಾವತಿ ಮಾಡಲಾಗುತ್ತದೆ.

ವಿಶ್ವವಿದ್ಯಾನಿಲಯವು ವಹಿಸುವ ಇತರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಬದ್ಧರಿರಬೇಕು. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡಿದ ಅರ್ಜಿ ಹಾಗೂ ಮೂಲದಾಖಲೆಗಳ ಪ್ರತಿಯನ್ನು ಸಂದರ್ಶನದ ದಿನ ದಂದು ಕಡ್ಡಾಯವಾಗಿ ತರಬೇಕು. ಆಯ್ಕೆಯಾದ ಅಭ್ಯರ್ಥಿಗಳು ಮಂಗಳೂರು ವಿಶ್ವ ವಿದ್ಯಾನಿಲಯದ ಯಾವುದೇ ಘಟಕ ಕಾಲೇಜುಗಳಲ್ಲಿ ಸೇವೆ ಸಲ್ಲಿಸಲು ಸಿದ್ಧರಿರಬೇಕು ಎಂದು ಕುಲಸಚಿವರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News