×
Ad

ಸೆ.30ರಂದು ಕಾಪು ಪಿಲಿ ಪರ್ಬ; ಕರಪತ್ರ ಬಿಡುಗಡೆಗೊಳಿಸಿದ ಜಿ.ಪರಮೇಶ್ವರ್

Update: 2025-08-25 21:42 IST

ಕಾಪು : ಕಾಪುವಿನ ರಕ್ಷಣಾಪುರ ಜವನೆರ್ ಇವರ ವತಿಯಿಂದ ಮಾಜಿ ಸಚಿವ ವಿನಯಕುಮಾರ್ ಸಾರಥ್ಯದಲ್ಲಿ ದಸರಾ ಹಬ್ಬದ ಪ್ರಯುಕ್ತ ಮೂರನೇ ವರ್ಷದ ಕಾಪು ಪಿಲಿ ಪರ್ಬ ಸೆ.30ರಂದು ಕಾಪು ಹೊಸ ಮಾರಿಗುಡಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.

ಇತ್ತೀಚೆಗೆ ಕಾಪು ರಾಜೀವ ಭವನಕ್ಕೆ ಭೇಟಿ ನೀಡಿದ್ದ ಗೃಹ ಸಚಿವರಾದ ಡಾ. ಜಿ.ಪರಮೇಶ್ವರ್ ಅವರು ಕಾಪು ಪಿಲಿ ಪರ್ಬದ ಕರಪತ್ರವನ್ನು ಬಿಡುಗಡೆಗೊಳಿಸಿ ಕಾರ್ಯಕ್ರಮದ ಯಶಸ್ವಿಗೆ ಶುಭಹಾರೈಸಿದರು.

ಕಾರ್ಯಕ್ರಮದ ವಿವರ ನೀಡಿದ ರಕ್ಷಣಾಪುರ ಜವನೆರ್ ಅಧ್ಯಕ್ಷ ನವೀನ್ ಎನ್. ಶಟ್ಟಿ, ಸ್ಪರ್ಧೆಯ ವಿಜೇತ ತಂಡಕ್ಕೆ ರೂ. 1.5 ಲಕ್ಷ, ದ್ವಿತೀಯ ರೂ. ಒಂದು ಲಕ್ಷ, ತೃತೀಯ ರೂ. 50ಸಾವಿರ ಹಾಗೂ ಹಲವು ವೈಯಕ್ತಿಕ ಬಹುಮಾನ ನೀಡಲಾಗುವುದು. ಅಂದು ಮಧ್ಯಾಹ್ನ 3.30ಕ್ಕೆ ಸ್ಪರ್ಧೆ ಆರಂಭಗೊಳ್ಳಲಿದೆ ಎಂದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ, ಅಶೋಕ್ ಕುಮಾರ್ ಕೊಡವೂರು, ಎಂ.ಎ.ಗಫೂರ್, ಜಿತೇಂದ್ರ ಪುರ್ಟಾಡೊ, ವೈ. ಸುಕುಮಾರ್, ನವೀನ್‍ಚಂದ್ರ ಜೆ. ಶೆಟ್ಟಿ, ನವೀನ್‍ಚಂದ್ರ ಸುವರ್ಣ ಅಡ್ವೆ, ಕಿಶನ್ ಹೆಗ್ಡೆ ಕೊಳ್ಕಬೈಲ್, ಮುನೀರ್ ಜಾನ್ಸಾಲೆ, ಹರಿಪ್ರಸಾದ್ ರೈ, ಕಾಪು ದಿವಾಕರ ಶೆಟ್ಟಿ, ಸಂತೋಷ್ ಕುಲಾಲ್, ಶಾಂತಲತಾ ಶೆಟ್ಟಿ, ಮುಹಮ್ಮದ್ ನಿಯಾಝ್, ಪ್ರಶಾಂತ್ ಜತ್ತನ್ನ, ದೀಪಕ್ ಕುಮಾರ್ ಎರ್ಮಾಳು, ಗಣೇಶ್ ಕೋಟ್ಯಾನ್, ಅಮೀರ್ ಕಾಪು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News