×
Ad

ಜ.31: ಮಂಜನಾಡಿ ಅಲ್ ಮದೀನಾದಲ್ಲಿ ಮಡವೂರು ಸಮ್ಮೇಳನ ಪ್ರಚಾರ ಉದ್ಘಾಟನೆ

Update: 2025-01-30 21:55 IST

ಮಂಗಳೂರು, ಜ.30: ಕೋಝಿಕ್ಕೋಡು ಜಿಲ್ಲೆಯ ಮಡೂವೂರಿನಲ್ಲಿ ಅಂತ್ಯವಿಶ್ರಾಂತಿ ಪಡೆಯುತ್ತಿರುವ ಖುತುಬುಲ್ ಆಲಂ ಶೈಖ್ ಸಿಎಂ ವಲಿಯುಲ್ಲಾಹಿ (ಖ.ಸಿ.)ರ ಸ್ಮರಣಾರ್ಥ, ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ನೇತೃತ್ವದಲ್ಲಿ ಮಡವೂರಿನಲ್ಲಿ ಕಾರ್ಯಾಚರಿಸುತ್ತಿರುವ ಸಿಎಂ ಸೆಂಟರ್ ವಿದ್ಯಾಸಂಸ್ಥೆಯ 35ನೇ ವಾರ್ಷಿಕ ಸಮ್ಮೇಳನದ ಕರ್ನಾಟಕ ರಾಜ್ಯದ ಪ್ರಚಾರ ಉದ್ಘಾಟನಾ ಸಮಾವೇಶವು ಜ.31ರ ಅಪರಾಹ್ನ 3ಕ್ಕೆ ಮಂಜನಾಡಿ ಅಲ್ ಮದಿನಾ ಕ್ಯಾಂಪಸ್‌ನಲ್ಲಿರುವ ಶರಫುಲ್ ಉಲಮಾ ಆಡಿಟೋರಿಯಂನಲ್ಲಿ ನಡೆಯಲಿದೆ.

ಶರಫುಲ್ ಉಲಮಾ ಅಬ್ಬಾಸ್‌ ಉಸ್ತಾದ್‌ ಅವರ ಮಖ್‌ಬರ ಝಿಯಾರತ್‌ನೊಂದಿಗೆ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷ ಅಶ್‌ಅರಿಯ ಮುಹಮ್ಮದ್ ಅಲಿ ಸಖಾಫಿ ನೇತೃತ್ವ ವಹಿಸಲಿದ್ದು, ಮಂಜನಾಡಿ ಅಲ್‌ ಮದೀನಾ ಕಾಂಪ್ಲೆಕ್ಸ್‌ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಸಖಾಫಿ ಉದ್ಘಾಟನೆ ಮಾಡಲಿದ್ದಾರೆ.

ಅತಿಥಿಗಳಾಗಿ ಮಡವೂರು ಸಿಎಂ ಸೆಂಟರ್‌ನ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅಬ್ದುಲ್ ರಹ್ಮಾನ್ ಬಾಖವಿ, ಸಯ್ಯಿದ್ ಖಲೀಲ್ ಬಾಅಲವಿ ತಂಳ್ ಮಡವೂರು, ಮುಸ್ತಫಾ ಸಖಾಫಿ ಮರೆಂಜಾಟಿ ಭಾಗವಹಿಸಲಿದ್ದಾರೆ. ಡಾ.ಎಮ್ಮೆಸ್ಸೆಮ್ ಅಬ್ದುರ‌್ರಶೀದ್ ಝೈನಿ ಸಂದೇಶ ಭಾಷಣ ಮಾಡಲಿದ್ದಾರೆ ಎಂದು ಕರ್ನಾಟಕ ರಾಜ್ಯ ಪ್ರಚಾರ ಸಮಿತಿ ಕಾರ್ಯದರ್ಶಿ ಸಲೀಮ್ ಕನ್ಯಾಡಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News