ಜು.4: ಕದ್ರಿ, ಬಂಟ್ಸ್‌ಹಾಸ್ಟೆಲ್, ಲೈಟ್‌ಹೌಸ್ ಹಿಲ್ ನಲ್ಲಿ ವಿದ್ಯುತ್ ನಿಲುಗಡೆ
Update: 2025-07-02 22:35 IST
ಮಂಗಳೂರು, ಜು.2: ಕದ್ರಿ ಉಪಕೇಂದ್ರದಿಂದ ಹೊರಡುವ ಬಂಟ್ಸ್ ಹಾಸ್ಟೆಲ್ ಮತ್ತು ಲೈಟ್‌ಹೌಸ್ ಹಿಲ್ ರೋಡ್ ಫೀಡರ್‌ಗಳ ವ್ಯಾಪ್ತಿಯಲ್ಲಿ ಜು.4 ರಂದು ವಿದ್ಯುತ್ ನಿಲುಗಡೆಗೊಳ್ಳಲಿದೆ.
ಅಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಜಾರ್ಜ್ ಮಾರ್ಟಿಸ್ ರಸ್ತೆ, ಮಲ್ಲಿ ಕಾಂಪೌಂಡ್, ಕ್ರಿಸ್ಟಲ್ ಬಾಗ್, ಸಿಟಿ ಹಾಸ್ಪಿಟಲ್, ಕಾಮತ್ ನರ್ಸಿಂಗ್ ಹೋಂ, ಆರ್ಯ ಸಮಾಜ ರಸ್ತೆ, ಪ್ಲಾಂಟರ್ಸ್ ಲೇನ್, ಬಂಟ್ಸ್ ಹಾಸ್ಟೆಲ್, ಪತ್ರಾವೋ ಲೇನ್, ವುಡ್ ಲ್ಯಾಂಡ್, ಗೋಲ್ಡ್‌ಫಿಂಚ್, ಜ್ಯೋತಿ ಟಾಕೀಸ್, ಲೈಟ್ ಹೌಸ್ ಹಿಲ್, ಲೇಡಿಸ್ ಕ್ಲಬ್‌ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.