×
Ad

ಹರೇಕಳ: ಕಪ್ಪೆ ಚಿಪ್ಪು ಹೆಕ್ಕಳು ನದಿಗೆ ಇಳಿದಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು

Update: 2025-02-09 21:36 IST

ಕೊಣಾಜೆ: ಹರೇಕಳ ಕಡವಿನ ಬಳಿ ಸಮೀಪ ನೇತ್ರಾವತಿ ನದಿ ತಟದಲ್ಲಿ ಕಪ್ಪೆ ಚಿಪ್ಪು ಹೆಕ್ಕಳು ತೆರಳಿದ್ದ ವಿವಾಹಿತರೊಬ್ಬರು ನದಿ ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ರವಿವಾರ ಸಂಭವಿಸಿದೆ.

ಬೈತಾರ್ ನಿವಾಸಿ ವಿನೋದ್ ಗಟ್ಟಿ (40) ಮೃತಪಟ್ಟವರು.

ಮನೆಯಿಂದ ಪಂಪವೆಲ್ ಕಡೆಗೆ ಕೆಲಸದನಿಮಿತ್ತ ತೆರಳಿದ್ದ ವಿನೋದ್ ಅವರು ಮಧ್ಯಾಹ್ನ ವೇಳೆ ವಾಪಾಸ್ಸಾಗಿದ್ದರು‌. ಬಳಿಕ ನದಿ ನೀರಿಗೆ ಇಳಿದು ಕಪ್ಪೆ ಚಿಪ್ಪು ಹೆಕ್ಕಲು ತೆರಳಿದ್ದರು ಎನ್ನಲಾಗಿದೆ. ಈ ವೇಳೆ ಕೆಸರಿನಲ್ಲಿ ಕಾಲು ಹೂತುಹೋಗಿದ್ದು, ಬಳಿಕ ನೀರಿನಿಂದ ಮೇಲೆಳಲು ಸಾಧ್ಯವಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಮೃತರು ವಿವಾಹಿತರಾಗಿದ್ದು ಪತ್ನಿ, ಪುತ್ರನನ್ನು ಅಗಲಿದ್ದಾರೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News