×
Ad

ಜ:5: ಕಲ್ಲಚ್ಚು ಪ್ರಕಾಶನ - ರಜತ ರಂಗು ಉದ್ಘಾಟನೆ

Update: 2025-01-03 20:20 IST

ಮಂಗಳೂರು, ಜ.3: ಕಳೆದ 25 ವರ್ಷಗಳಿಂದ ಮಂಗಳೂರು ಕೇಂದ್ರವಾಗಿ ಸಾಹಿತ್ಯ ಸಂಸ್ಕೃತಿ ಕಲೆ ಸಂಘಟನೆ ಸದ್ವಿಚಾರ’ ಎಂಬ ನೆಲೆಯಲ್ಲಿ ಸಾಹಿತ್ಯ ಪುಸ್ತಕಗಳ ಪ್ರಕಟಣೆ ಮತ್ತು ದೇಶ ವಿದೇಶಗಳಲ್ಲಿ ಸಾಹಿತ್ಯ ಪರ ಕಾರ್ಯಕ್ರಮಗಳನ್ನು ಯಶಸ್ವಿ ಯಾಗಿ ಆಯೋಜಿಸಿರುವ ಕಲ್ಲಚ್ಚು ಪ್ರಕಾಶನ ಸಂಸ್ಥೆಯ ಬೆಳ್ಳಿ ಹಬ್ಬ ರಜತ ರಂಗು ಕಾರ್ಯಕ್ರಮ ಜ. 5ರಂದು ನಗರದ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ನಡೆಯಲಿದೆ.

ಕೇಂದ್ರ ಸಾಹಿತ್ಯ ಅಕಾಡಮಿ ನಿವೃತ್ತ ಉಪಕಾರ್ಯದರ್ಶಿ ಡಾ. ಮಹಾಲಿಂಗೇಶ್ವರ ಎಸ್.ಪಿ. ಉದ್ಘಾಟಿಸಲಿದ್ದು, ಈ ಸಂದರ್ಭ ಹೊರಬರುವ ಕಲ್ಲಚ್ಚು ಪ್ರಕಾಶನದ ಮಹೇಶ ಆರ್. ನಾಯಕ್ ಅವರ ’ಅನೂಗೂಡುನೂ ಬಾ’ - ಕಥೆ ಕವನಗಳ ಕಾರು ಬಾರಿನೊಳು ಎಂಬ ಕೃತಿಯನ್ನು ಸಾಹಿತಿಗಳಾದ ಡಾ. ಪ್ರಭಾಕರ ನೀರ್‌ಮಾರ್ಗ ಬಿಡುಗಡೆಗೊಳಿಸಲಿರುವರು.

ಕಥೆಗಾರ ಡಾ. ಸಂಪೂರ್ಣಾನಂದ ಬಳ್ಕೂರು ಕೃತಿ ಪರಿಚಯ ಮಾಡಲಿದ್ದಾರೆ. ಈ ಸಂದರ್ಭ ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಮತ್ತು ಉದ್ಯಮಿ ಜಯಂತ್ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಮತ್ತು ಹಿಂದಿ ಭಾಷ ಹಾಡುಗಳ ಗಾಯನವೂ ಜರುಗಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News