ಜ.5: ಬೈಕಾಡಿ ಪ್ರಶಸ್ತಿ ಪ್ರದಾನ
Update: 2025-01-03 20:23 IST
ಮಂಗಳೂರು,ಜ.3: ಬಹುಮುಖ ವ್ಯಕ್ತಿತ್ವದ ಬೈಕಾಡಿ ಜನಾರ್ದನ ಆಚಾರ್ ಅವರ ಹೆಸರಿನಲ್ಲಿ ಸ್ಥಾಪಿಸಲಾದ ಬೈಕಾಡಿ ಪ್ರತಿಷ್ಠಾನದ ವತಿಯಿಂದ ಪ್ರತೀ ವರ್ಷ ಬೈಕಾಡಿಯ ಹುಟ್ಟುಹಬ್ಬದಂದು ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ನೀಡುತ್ತಾ ಬಂದಿದೆ. 5ನೇ ವರ್ಷದ ಈ ಪ್ರಶಸ್ತಿಯನ್ನು ಸಾಹಿತಿ, ಸಮಾಜ ಸೇವಕಿ ಹಾಗೂ ನಿವೃತ್ತ ಅಧ್ಯಾಪಕಿ ಕೆ. ಎ. ರೋಹಿಣಿ ಅವರಿಗೆ ನೀಡಲಾಗುತ್ತದೆ.
ಜ.5ರಂದು ಸಂಜೆ 5ಕ್ಕೆ ಉರ್ವಸ್ಟೋರ್‌ನಲ್ಲಿರುವ ತುಳು ಅಕಾಡಮಿಯ ತುಳು ಭವನದ ಪ್ರೊ. ಅಮೃತ ಸೋಮೇಶ್ವರ ಸಭಾಂಗಣ, ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.