×
Ad

ಅ.6: ಯುನಿವೆಫ್‌ನಿಂದ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನಕ್ಕೆ ಚಾಲನೆ

Update: 2023-10-05 21:33 IST

ಮಂಗಳೂರು, ಅ.5: ಯುನಿವೆಫ್ ಕರ್ನಾಟಕ ಇದರ 18ನೇ ವರ್ಷದ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಎಂಬ ಅಭಿಯಾನವು ಅ.6ರಿಂದ ಡಿ.22ರವರೆಗೆ ‘ಮಾನವಧರ್ಮ ದೈವಿಕ ಕಾನೂನು ಮತ್ತು ಪ್ರವಾದಿ ಮುಹಮ್ಮದ್ (ಸ)’ ಎಂಬ ಕೇಂದ್ರೀಯ ವಿಷಯದಲ್ಲಿ ನಡೆಯಲಿದೆ

ಈ ಅಭಿಯಾನವು ಅ.6ರ ಸಂಜೆ 6:45ಕ್ಕೆ ನಗರದ ಕಂಕನಾಡಿಯ ಜಮೀಯತುಲ್ ಫಲಾಹ್ ಹಾಲ್‌ನಲ್ಲಿ ಉದ್ಘಾಟನೆ ಗೊಳ್ಳಲಿದೆ. ಮಂಗಳೂರಿನ ನೂರ್ ಮಸ್ಜಿದ್‌ನ ಮಾಜಿ ಖತೀಬ್ ಮೌಲವಿ ಯೂಸುಫ್ ಕೌಸರಿ ಉದ್ಘಾಟಿಸಲಿದ್ದು, ಯುನಿವೆಫ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮುಖ್ಯ ಭಾಷಣ ಮಾಡಲಿರುವರು. ಈ ಸಂದರ್ಭ ಚುನಾಯಿತ ಪದಾಧಿಕಾರಿಗಳ ಪದ ಗ್ರಹಣ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ಪ್ರಚಾರಾರ್ಥ ಅ.6ರ ಸಂಜೆ 5ಕ್ಕೆ ನಗರದ ಫಳ್ನೀರ್‌ನ ದಾರುಲ್ ಇಲ್ಮ್‌ನಿಂದ ಕಂಕನಾಡಿಯ ಜಮೀಯತುಲ್ ಫಲಾಹ್ ಹಾಲ್‌ವರೆಗೆ ಕಾಲ್ನಡಿಗೆ ಜಾಥಾ ನಡೆಯಲಿದೆ ಎಂದು ಅಭಿಯಾನದ ಸಂಚಾಲಕ ಸೈಫುದ್ದೀನ್ ಕುದ್ರೋಳಿ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News