×
Ad

ಜ.7: ಕೆಮ್ಮಾಯಿಯಲ್ಲಿ ಜಲಾಲಿಯ್ಯ ರಾತೀಬ್ ಮಜ್ಲೀಸ್

Update: 2024-01-04 21:47 IST

ಪುತ್ತೂರು: ಬುಸ್ತಾನುಲ್ ಬಾದುಷ ಮಜ್ಲೀಸ್ ಹಾಗೂ ಜಲಾಲಿಯ್ಯಾ ರಾತೀಬ್ ಸಮಿತಿ ಕೆಮ್ಮಾಯಿ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ 2ನೇ ವಾರ್ಷಿಕ ಜಲಾಲಿಯ್ಯ ರಾತೀಬ್ ಮಜ್ಲೀಸ್ ಕಾರ್ಯಕ್ರಮ ಮತ್ತು ಮತಪ್ರಭಾಷಣ ಕಾರ್ಯಕ್ರಮ ಜನವರಿ 7ರಂದು ಸಂಜೆ 7 ಗಂಟೆಯಿಂದ ಕೆಮ್ಮಾಯಿ ತಂಙಳ್ ನಿವಾಸದಲ್ಲಿ ನಡೆಯಲಿದೆ ಎಂದು ಸಮಿತಿಯ ಸಂಚಾಲಕ ಇಸಾಕ್ ಸಾಲ್ಮರ ಹೇಳಿದರು.

ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಂಜೆ ಮಗ್ರಿಬ್ ನಮಾಝ್ ಬಳಿಕ ಮತ ಪ್ರಭಾಷಣ ಕಾರ್ಯಕ್ರಮ ಆರಂಭಗೊಳ್ಳಲಿದೆ. ಬಹು. ಹಾಜಿ ಸಯ್ಯದ್ ಅಬೂಬಕ್ಕರ್ ಅಲ್‍ಹಾದಿ ತಂಙಳ್ ಕೆಮ್ಮಾಯಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೆಮ್ಮಾಯಿ ಮದರ್ರಿಸ್ ಆಗಿರುವ ಬಹು. ಮಹಮ್ಮದ್ ಇರ್ಷಾದ್ ಸಖಾಫಿ ಅಲ್‍ಹಿಕಮಿ ಅಲ್ ಅರ್ಶದಿ ಉದ್ಘಾಟನೆ ಮಾಡಲಿದ್ದಾರೆ. ಬಹು. ಯು.ಕೆ. ಮಹಮ್ಮದ್ ಹನೀಫ್ ನಿಝಾಮಿ ಮೊಗ್ರಾಲ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬಹು. ಅಲ್‍ಹಾಜಿ ಅಸ್ಸಯಿದ್ ಮಹಮ್ಮದ್ ಅಲ್‍ಹಾದಿ ತಂಙಳ್ ಸಾಲ್ಮರ ಮತ್ತು ಬಹು. ಅಲ್‍ಹಾಜಿ ಅಸ್ಸಯಿದ್ ಹಾಮಿದ್ ತಂಙಳ್ ಮಂಜೇಶ್ವರ ಇವರು ಗೌರವ ಉಪಸ್ಥಿತಿ ಇರಲಿದ್ದಾರೆ ಎಂದರು.

ರಾತ್ರಿ ಇಶಾ ನಮಾಜಿನ ಬಳಿಕ ಬಹು. ಸಯ್ಯದ್ ಅಹ್ಮದ್ ಮುಖ್ತಾರ್ ತಂಙಳ್ ಕುಂಬೋಲ್ ಅವರ ನೇತೃತ್ವದಲ್ಲಿ ಜಲಾಲಿಯ್ಯಾ ರಾತೀಬ್ ಮಜ್ಲೀಸ್ ಕಾರ್ಯಕ್ರಮ ನಡೆಯಲಿದೆ. ಕೊನೆಯಲ್ಲಿ ಅನ್ನಸಂತರ್ಪಣೆ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಯೂಸುಫ್ ಸಾಲ್ಮರ, ಖಜಾಂಚಿ ಮೂಸಾ ಹಾಜಿ ಕೆಮ್ಮಾಯಿ, ಸದಸ್ಯರಾದ ಆದಂ ಕೆಮ್ಮಾಯಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News