ಮಾ.7: ದ.ಕ.ಜಿಲ್ಲೆಗೆ ರಾಜ್ಯ ಸರಕಾರದ ವಿಶೇಷ ಪ್ರತಿನಿಧಿ ಭೇಟಿ
Update: 2025-03-06 19:47 IST
ಮಂಗಳೂರು, ಮಾ.6: ರಾಜ್ಯ ಸರಕಾರದ ನವದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಮಾ.7ರಿಂದ 8ರವರೆಗೆ ದ.ಕ. ಜಿಲ್ಲಾ ಪ್ರವಾಸಕೈಗೊಂಡಿದ್ದಾರೆ.
ಮಾ.7ರಂದುರಾತ್ರಿ 10:30ಕ್ಕೆ ಧರ್ಮಸ್ಥಳದ ಸನ್ನಿಧಿ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡುವರು. ಮಾ.8ರಂದು ಬೆಳಗ್ಗೆ 9:30ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ, ಮಧ್ಯಾಹ್ನ 2:30ಕ್ಕೆ ಕಾಂಗ್ರೆಸ್ ಪಕ್ಷದ ಬಂಟ್ವಾಳ ಕಚೇರಿಗೆ ಭೇಟಿ ನೀಡುವರು. ಸಂಜೆ 6:30ಕ್ಕೆ ಮೂಡೂರು ಪಡೂರು ಜೋಡುಕರೆ ಕಂಬಳ ಸಮಿತಿ ವತಿ ಯಿಂದ ಬಂಟ್ವಾಳ ನಾವೂರು ಕೂಡಿಬೈಲಿನಲ್ಲಿ ಏರ್ಪಡಿಸಿರುವ ಕಂಬಳದಲ್ಲಿ ಭಾಗವಹಿಸಿ ಬಳಿಕ ಚಿಕ್ಕಮಗಳೂರಿಗೆ ತೆರಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.