×
Ad

ಫೆ.7: :ಪುಟ್ಟ ರೋಗಿಗಳು ದೊಡ್ಡ ನಿರ್ಧಾರಗಳು" - ವೈದ್ಯಕೀಯ ಕಾರ್ಯಾಗಾರ

Update: 2026-02-02 20:31 IST

ಉಳ್ಳಾಲ : ನಾಟೇಕಲ್ ಪ್ರದೇಶದಲ್ಲಿರುವ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ಶಾಸ್ತ್ರ ಮತ್ತು ಚಿಕಿತ್ಸಾ ವಿಭಾಗ ಮತ್ತು ಸೂಕ್ಷ್ಮ ಜೀವ ವಿಜ್ಞಾನ ಶಾಸ್ತ್ರ ವಿಭಾಗ ಹಾಗೂ ಔಷಧ ಶಾಸ್ತ್ರ ವಿಭಾಗ ಸಹಯೋಗದಲ್ಲಿ ಒಂದು ದಿನದ ಅವಧಿಯ "ಪುಟ್ಟ ರೋಗಿಗಳು ದೊಡ್ಡ ನಿರ್ಧಾರಗಳು" ಶೀರ್ಷಿಕೆಯಡಿ ಸಮಗ್ರ, ವೈದ್ಯಕೀಯ ಕಾರ್ಯಾಗಾರವು ಫೆ.7 ರಂದು ಬೆಳಿಗ್ಗೆ 10:30 ಕ್ಕೆ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಪ್ರೋ. ಡಾ| ಶಂಶಾದ್ ಖಾನ್ ಹೇಳಿದರು.

ಅವರು ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ. ಹಾಜಿ ಯು.ಕೆ. ಮೋನುರವರು ಸಂಸ್ಥೆಯ ನಿರಂತರ ವೈದ್ಯಕೀಯ ಶಿಕ್ಷಣದ ಅಂಗವಾಗಿ ಹಮ್ಮಿಕೊಂಡ ವೈದ್ಯಕೀಯ ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ.

ಈ ಕಾರ್ಯಕ್ರಮ ದಲ್ಲಿ ರಾಷ್ಟ್ರ ಮಟ್ಟದ ವಿವಿಧ ವೈದ್ಯಕೀಯ ಪ್ರತಿಷ್ಠಿತ ಸಂಸ್ಥೆಗಳ ನುರಿತ ಮಕ್ಕಳ ಶಾಸ್ತ್ರ ತಜ್ಞರು, ಔಷಧ ಶಾಸ್ತ್ರ ತಜ್ಞರು ಮತ್ತು ಸೂಕ್ಷ್ಮ ಜೀವ ವಿಜ್ಞಾನ ಶಾಸ್ತ್ರ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಮಕ್ಕಳ ಚಿಕಿತ್ಸೆಯಲ್ಲಿ ಅತಿಯಾದ ಅನಾವಶ್ಯಕವಾದ ರೋಗ ನಿರೋಧಕ ಔಷಧ ಬಳಕೆಯಿಂದ, ಬ್ಯಾಕ್ಟಿರಿಯಾಗಳಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಾಗಿದ್ದು, ಈ ಸಮಸ್ಯೆಗೆ ವೈದ್ಯಕೀಯ ವೃತ್ತಿಪರರಲ್ಲಿ ತರ್ಕಬದ್ಧ ಔಷಧೋಪಚಾರ ಮತ್ತು ವೈಜ್ಞಾನಿಕ ಚಿಕಿತ್ಸಾ ಪದ್ಧತಿಯ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.

ಸುದ್ದಿ ಗೋಷ್ಠಿ ಯಲ್ಲಿ ಔಷಧ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಡಾ| ಯಶ್ವಂತ್ ಕುಮಾರ್ ರೈ, ಮಕ್ಕಳ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಡಾ| ಒನೀಲ್ ಫೆರ್ನಾಂಡಿಸ್, ಮಕ್ಕಳ ಶಾಸ್ತ್ರ ತಜ್ಞರು ಡಾ.ಪೃಥ್ವಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News