×
Ad

ಟ್ವೆಕಾಂಡೋ ಪಂದ್ಯ: ದ.ಕ.ಜಿಲ್ಲೆಗೆ ಚಿನ್ನ, ಬೆಳ್ಳಿ ಪದಕ

Update: 2026-02-02 21:56 IST

ಮಂಗಳೂರು: ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಟ್ವೆಕಾಂಡೋ ಚಾಂಪಿಯನ್ ಶಿಪ್-2026 (8ನೇ ಕೆಟಿಎ ಕಪ್) ಕ್ರೀಡಾಕೂಟದಲ್ಲಿ ದ.ಕ. ಜಿಲ್ಲೆಯ ಟ್ವೆಕಾಂಡೋ ಕ್ರೀಡಾಪಟುಗಳು 2 ಚಿನ್ನ ಹಾಗೂ 2 ಬೆಳ್ಳಿ ಪದಕಗಳನ್ನು ಗಳಿಸಿದ್ದಾರೆ.

12 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ರಫಾನ್ ರಹ್ಮತುಲ್ಲಾ ಅಹ್ಮದ್ ಸುರತ್ಕಲ್ ಹಾಗೂ 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ವಿಷ್ಣು ಇಡ್ಯಾ-ಸುರತ್ಕಲ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ರಫಾನ್ ಅವರು ರಹಮತುಲ್ಲಾ ಅಹ್ಮದ್-ಫಾತಿಮಾ ಫರ್ಝಾನಾ ದಂಪತಿಯ ಪುತ್ರ. ವಿಷ್ಣು ಅವರು ರವಿ-ಜ್ಯೋತಿ ದಂಪತಿಯ ಪುತ್ರ.

15 ವರ್ಷ ಮೇಲ್ಪಟ್ಟ ಬಾಲಕರ ವಿಭಾಗದಲ್ಲಿ ಆಯಾನ್ ಅಹ್ಮದ್ ಮಂಗಳೂರು ಹಾಗೂ 14 ವರ್ಷದೊಳಗಿನ ಬಾಲಕಿ ಯರ ವಿಭಾಗದಲ್ಲಿ ಕುಳಾಯಿಯ ಅವಂತಿಕಾ ಎಸ್. ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಅಯಾನ್ ಅಹ್ಮದ್ ಅವರು ನಜೀಮ್ ಅಹ್ಮದ್ - ಸುನೇನಾ ನಜೀಮ್ ದಂಪತಿಯ ಪುತ್ರ. ಅವಂತಿಕಾ ಅವರು ವಿನೋದ್ ಎಸ್.-ಸುಮಾ ಕೆ ದಂಪತಿಯ ಪುತ್ರಿ.

ದ.ಕ. ಟ್ವೇಕಾಂಡೋ ಸಂಘದ ಪ್ರಧಾನ ಕಾರ್ಯದರ್ಶಿ ಇಶಾಕ್ ಇಸ್ಮಾಯಿಲ್ ನಂದಾವರ ಈ ಕ್ರೀಡಾಪಟು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News