×
Ad

ಮಾ.8ರಂದು ತೊಕೊಟ್ಟು ಉಪಕೇಂದ್ರಕ್ಕೆ ಅಳವಡಿಸಿದ ಕೇಬಲ್ ಕಾಮಗಾರಿಯ ಪರೀಕ್ಷಾರ್ಥ ಚಾಲನೆ

Update: 2025-03-07 17:49 IST

ಉಳ್ಳಾಲ: ಜೆಪ್ಪು ಉಪಕೇಂದ್ರದಿಂದ ತೊಕೊಟ್ಟು ಉಪಕೇಂದ್ರಕ್ಕೆ ಸುಮಾರು 5.73ಕೋಟಿ ರೂ. ವೆಚ್ಚದಲ್ಲಿ  ಕೇಬಲ್ ಅಳವಡಿಸುವ ಕಾಮಗಾರಿ ಮತ್ತು 1.54 ಕೋಟಿ ರೂ. ವೆಚ್ಚದಲ್ಲಿ ತೊಕೊಟ್ಟು ಉಪ ಕೇಂದ್ರದಲ್ಲಿ 5ಯಂವಿಎ ಸಾಮರ್ಥ್ಯದ ಶಕ್ತಿ ಪರಿವರ್ತಕವನ್ನು 12.2.2 ಪರಿವರ್ತಕಕ್ಕೆ ಉನ್ನತೀಕರಿಸುವ ಕೆಲಸ ಪೂರ್ಣಗೊಂಡಿದ್ದು ಶನಿವಾರ ಬೆಳಗ್ಗೆ 10 ಗಂಟೆಗೆ ಪರೀಕ್ಷಾರ್ಥ ಚಾಲನೆ ಗೊಳ್ಳಲಿದೆ. ವಿಧಾನ ಸಭಾಧ್ಯಕ್ಷ ಯು. ಟಿ .ಖಾದರ್ ಚಾಲನೆ ನೀಡಲಿದ್ದಾರೆ ಎಂದು ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು.

ತೊಕ್ಕೊಟ್ಟಿನಲ್ಲಿರುವ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕಾಮಗಾರಿಯಿಂದ ಉಳ್ಳಾಲ, ಸೋಮೇಶ್ವರ, ಕೋಟೆಕಾರು, ಮುನ್ನೂರು, ಅಂಬ್ಲಮೊಗರು ಪ್ರದೇಶದಲ್ಲಿ ಉತ್ತಮ ಗುಣ ಮಟ್ಟದ ವಿದ್ಯುತ್ ಸರಬರಾಜು ವ್ಯವಸ್ಥೆ ಲಭ್ಯವಾಗಲಿದೆ.‌ ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಬರುವ ಸಜೀಪನಡು, ಸಜಿಪಪಡು ನರಿಂಗಾನ, ಮುಡಿಪು, ಗ್ರಾಮಗಳು ಈ ಹಿಂದೆ ಮೆಸ್ಕಾಂ ಬಂಟ್ವಾಳ ವ್ಯಾಪ್ತಿಯಲ್ಲಿದ್ದು ಸದ್ರಿ ಗ್ರಾಮಗಳನ್ನು ಒಳಗೊಂಡು ಉಳ್ಳಾಲ ತಾಲೂಕಿನ ಅಸೈಗೋಳಿಯಲ್ಲಿ ಹೊಸದಾಗಿ ಕೊಣಾಜೆ ಉಪವಿಭಾಗ ಕಾರ್ಯರಂಭಗೊಂಡಿದೆ. ಹೊಸದಾಗಿ ಬೋಳಿ ಯಾರ್, ಕಿನ್ಯಾ ಮತ್ತು ಸೋಮೇಶ್ವರ ಶಾಖೆ ಹಾಗೂ ಸದ್ರಿ ಕಚೇರಿಗಳಿಗೆ ಹೆಚ್ಚುವರಿ ಇಂಜಿನಿಯರ್, ಪವರ್ ಮ್ಯಾನ್ ಗಳು, ಹೆಚ್ಚುವರಿ 24×7 ವಿದ್ಯುತ್ ಸೇವಾ ಕೇಂದ್ರ ಮತ್ತು ಹೆಚ್ಚುವರಿ ಸೇವಾ ಕೇಂದ್ರಕ್ಕೆ ವಾಹನ ಮಂಜೂರಾತಿಗೊಂಡು ಕಾರ್ಯಾರಂಭಗೊಂಡಿದೆ ಎಂದು ತಿಳಿಸಿದರು.

ಹೊಸದಾಗಿ ಪ್ರಾರಂಭಗೊಂಡಿರುವ ಕೊಣಾಜೆ ಉಪವಿಭಾಗದಲ್ಲಿ ಮುಡಿಪು, ನರಿಂಗಾನ, ಕೈರಂಗಳ, ಪಜೀರ್, ಬಾಳೆಪುಣಿ ಮತ್ತು ಕುರ್ನಾಡ್. ಬೋಳಿಯಾರ್ ಶಾಖೆಯಲ್ಲಿ ಸಜೀಪನಡು. ಸಜಿಪಪಡು, ಬೋಳಿ ಯಾರ್ ಗ್ರಾಮಗಳು ಹೊಸ ಬೋಳಿಯಾರ್ ಶಾಖಾ ವ್ಯಾಪ್ತಿಗೊಳಪಟ್ಟಿದೆ. ಕೊಣಾಜೆ ಶಾಖೆಯಲ್ಲಿ ಹರೇಕಳ, ಕೊಣಾಜೆ ಮತ್ತು ಪಾವೂರು ಗ್ರಾಮಗಳು ಒಳಪಟ್ಟಿದೆ.

ಕಿನ್ಯಾ ಶಾಖೆ ಹೊಸದಾಗಿ ಮಂಜೂರಾತಿಗೊಂಡ ಶಾಖೆಯಾಗಿದ್ದು ಈ ಶಾಖೆ ಕಿನ್ಯಾ ಮತ್ತು ಮಂಜನಾಡಿ ಗ್ರಾಮ ವ್ಯಾಪ್ತಿಗೊಳಪಡುತ್ತದೆ. ನೂತನ 33/11 ಕೆವಿ ಕೋಟೆಕಾರ್ ಉಪಕೇಂದ್ರದ ಕಾಮಗಾರಿಯೂ ಪೂರ್ಣಗೊಂಡಿದ್ದು ಸಭಾಪತಿಗಳು ಪರೀಕ್ಷಾರ್ಥ ಚಾಲನೆಗೊಳಿಸಲಿದ್ದಾರೆ ಎಂದರು.

ಕಾಮಗಾರ 8ಕೋಟಿ ರೂ. ಮೊತ್ತದ್ದಾಗಿದ್ದು ಈ ಉಪಕೇಂದ್ರ ದಿಂದ ಕೋಟೆಕಾರು, ತಲಪಾಡಿ, ಕಿನ್ಯ, ಮಂಜನಾಡಿ ಪ್ರದೇಶದಲ್ಲಿ ಉತ್ತಮ ಗುಣ ಮಟ್ಟದ ವಿದ್ಯುತ್ ಸರಬರಾಜು ವ್ಯವಸ್ಥೆ ಲಭ್ಯವಾಗುತ್ತದೆ. ಪ್ರಸ್ತುತ ಇರುವ 33/11ಕೆವಿ ತೊಕೊಟ್ಟು ಉಪಕೇಂದ್ರವನ್ನು 110/33/11ಕೆವಿ ಉಪಕೇಂದ್ರಕ್ಕೆ, ಉನ್ನತೀ ಕರಿಸಲು ಕೆಪಿಟಿಸಿಯಲ್ ಟೆಂಡರ್ ಕರೆದಿದ್ದು ಕಾಮಗಾರಿ ಪೂರ್ಣಗೊಂಡಲ್ಲಿ ಉಳ್ಳಾಲ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ವಿದ್ಯುತ್ ಸರಬರಾಜು ವ್ಯವಸ್ಥೆ ಲಭ್ಯವಾಗುತ್ತದೆ. ಈ ಕಾಮಗಾರಿ ಮೊತ್ತ 67ಕೋಟಿ ರೂ. ಗಳ ದ್ದಾಗಿದೆ ಎಂದು ಹೇಳಿದರು.

ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿರುವ ಎಲ್ಲ ಹೆಚ್.ಟಿ ಮತ್ತು ಎಲ್.ಟಿ. ಲೈನ್ ಗಳನ್ನು ಭೂಗತ ಕೇಬಲ್ ಗೆ ಅಳವಡಿಸುವ ಕಾಮಗಾರಿ ಸಂಪೂರ್ಣಗೊಂಡಲ್ಲಿ ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಯಾವುದೇ ವಿದ್ಯುತ್ ಕಂಬಗಳ ಅವಶ್ಯಕತೆ ಇರುವುದಿಲ್ಲ. ಇದ್ದರಿಂದ ಉತ್ತಮ ಗುಣಮಟ್ಟದ ಅನಿಯಮಿತ ವಿದ್ಯುತ್ ಸರಬರಾಜು ವ್ಯವಸ್ಥೆ ಲಭ್ಯವಾಗುತ್ತದೆ. ಗಾಳಿ, ಮಳೆ ಸಂದರ್ಭದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವುದಿಲ್ಲ. ಈ ಕಾಮಗಾರಿ ಅಂದಾಜು 197 ಕೋಟಿ ರೂ. ವೆಚ್ಚದ್ದಾಗಿದೆ ಎಂದರು.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ನಗರ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ರೈ, ಮುಖಂಡರಾದ ಮನ್ಸೂರ್ ಮಂಚಿಲ, ಅಶ್ರಫ್ ಕೆ. ಸಿ. ರೋಡ್ ಹಾಗೂ ಪಿಯುಸ್ ಡಿಸೋಜ ಉಪಸ್ಥಿತರಿದ್ದರು.

ಜಾಫರ್ ಸಖಾಫಿ, ಮುಸ್ತಾಕ್ ಅಹ್ಮದ್ ಎನ್ನಬೈಲ್, ಮಜೀದ್ ಹಾಜಿ ಉಚ್ಚಿಲ, ಸೋಮೇಶ್ವರ ಪುರಸಭೆ ಸದಸ್ಯ ಸಲಾಂ ಉಚ್ಚಿಲ, ಇಬ್ರಾಹಿಂ ಫೈಝಿ, ಅಧ್ಯಕ್ಷ ಇಸ್ಮಾಯಿಲ್ ಹಾಜಿ ಕೊಪ್ಪಳ, ಸಲಾಂ ಉಚ್ಚಿಲ ಕೋಶಾಧಿಕಾರಿ ಹಸೈನಾರ್ ಹಾಜಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News