ಮಾಸುನ್ ಟೈಲ್ಸ್, ಗ್ರಾನೈಟ್ಸ್, ಮಾರ್ಬಲ್ಸ್‌ನಲ್ಲಿ 9ನೇ ವಾರ್ಷಿಕ ಸಂಭ್ರಮದ ವಿಶೇಷ ಕೊಡುಗೆ
ಮಂಗಳೂರು: ರಾ.ಹೆ.66ರ ಜಪ್ಪಿನಮೊಗರುವಿನಲ್ಲಿರುವ ಮಾಸುನ್ ಟೈಲ್ಸ್, ಗ್ರಾನೈಟ್ಸ್ ಮತ್ತು ಮಾರ್ಬಲ್ಸ್ ಮಳಿಗೆಯಲ್ಲಿ 9ನೇ ವಾರ್ಷಿಕ ಸಂಭ್ರಮದ ವಿಶೇಷ ಕೊಡುಗೆಯು ಜು.5ರಿಂದ ಆರಂಭಗೊಂಡಿವೆ. ಗ್ರಾಹಕರ ಸಂತೃಪ್ತಿಗಾಗಿ ಅಕ್ಟೋಬರ್ 5ರವರೆಗೆ ಮೆಗಾ ಲಕ್ಕಿ ಡ್ರಾ ಧಮಾಕ ಕೊಡುಗೆಯನ್ನು ನೀಡುತ್ತಿದೆ.
ಮಳಿಗೆಯಲ್ಲಿ ಕಟ್ಟಡ ಮತ್ತು ಮನೆಯ ಕಾಮಗಾರಿಗೆ ಬೇಕಾದ ಟೈಲ್ಸ್, ಗ್ರಾನೈಟ್ಸ್ ಮತ್ತು ಮಾರ್ಬಲ್ಸ್, ಸ್ಯಾನಿಟರಿವೇರ್ ಮತ್ತು ಟ್ಯಾಪ್ ಫಿಟ್ಟಿಂಗ್ಸ್‌ನ ಉತ್ತಮ ಗುಣಮಟ್ಟದ ವಿವಿಧ ಮಾದರಿಯ ಸಾಮಗ್ರಿಗಳು ಗ್ರಾಹಕರಿಗೆ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ.
ಈ ಮಳಿಗೆಯಲ್ಲಿ ಗ್ರಾಹಕರು 10,000 ರೂ.ಮೌಲ್ಯದ ಸಾಮಗ್ರಿಗಳನ್ನು ಖರೀದಿಸಿದಲ್ಲಿ ಬಂಪರ್ ಡ್ರಾ ಮೂಲಕ ದ್ವಿಚಕ್ರ ವಾಹನ ಗೆಲ್ಲಬಹುದು. ವಿಶೇಷ ಕೊಡುಗೆಯಾಗಿ ಚಿನ್ನದ ನಾಣ್ಯಗಳು, ಮೊಬೈಲ್ ಫೋನ್‌ಗಳು ಮತ್ತು ಸ್ಮಾರ್ಟ್‌ವಾಚ್‌ಗಳನ್ನು ಗ್ರಾಹಕರ ಸಂತೃಪ್ತಿಗಾಗಿ ನೀಡುತ್ತಿದೆ.
ಈಗಾಗಲೇ ಅಸಂಖ್ಯಾತ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವುದರ ಮೂಲಕ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ಮಾಲಕ ಮುನೀರ್ ಮೊಯ್ದಿನ್ ತಿಳಿಸಿದ್ದಾರೆ.