ಸಂಸ್ಕಾರಯುತ ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಡಾ. ಗಣನಾಥ ಶೆಟ್ಟಿ
ಕಾರ್ಕಳ: ರೋಟರಿ ಕ್ಲಬ್ ವತಿಯಿಂದ ಸಂಭ್ರಮ - ಸಮ್ಮಿಲನ
ಕಾರ್ಕಳ, ಜ. 8: ಸಂಸ್ಕಾರಯುತ ಶಿಕ್ಷಣ ಇಂದಿನ ದಿನಗಳಲ್ಲಿ ಅವಶ್ಯಕವಾಗಿದೆ. ಕಲಿಕೆಯೊಂದಿಗೆ ಪರಿಸರದ ಬಗೆಗಿನ ಕಾಳಜಿಯೂ ಅತೀ ಅಗತ್ಯವಾಗಿದೆ. ಅಮೆರಿಕಾದಂತಹ ದೇಶದಲ್ಲೂ ಉದ್ಯೋಗ ಕ್ಷೇತ್ರದಲ್ಲಿ ಭಾರತೀಯ ಯುವಕರಿಗೆ ಉತ್ತಮ ಅವಕಾಶವಿದೆ. ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಅವರ ಹುಮ್ಮಸ್ಸನ್ನು ಇಮ್ಮಡಿಗೊಳಿಸುವ ಕೆಲಸವನ್ನು ಕಾರ್ಕಳ ರೋಟರಿ ಸಂಸ್ಥೆಯು ಮಾಡುತ್ತಿರುವುದು ಅಭಿನಂದನೀಯ ಎಂದು ಕಾರ್ಕಳ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹ ಸಂಸ್ಥಾಪಕ ಡಾ.ಗಣನಾಥ ಶೆಟ್ಟಿ ಬಿ. ಹೇಳಿದರು.
ಅವರು ಕಾರ್ಕಳ ಕಾಬೆಟ್ಟು ಕಟ್ಟೆಮಾರ್ ನೈವೇದ್ಯ ಸಭಾ ವೇದಿಕೆಯಲ್ಲಿ ರೋಟರಿ ಸಂಸ್ಥೆಯ ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆಯ ಸಂಭ್ರಮ ಸಮ್ಮಿಲನ ಸಮಾರಂಭದಲ್ಲಿ ಭಾಗವಹಿಸಿ ಸಾಧಕರಾದ ಖ್ಯಾತ ಶಿಲ್ಪಿ ಕೆ ಸತೀಶ್ ಆಚಾರ್ಯ ಹಾಗೂ ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಹೆಬ್ರಿ ಇದರ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಯವರನ್ನು ಗೌರವಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ರೋಟರಿಯ ರೋಟರಿ ಜಿಲ್ಲೆ 3182 ರ ಪ್ರತಿನಿಧಿಯಾಗಿ 2026 - 28ರ ಅವಧಿಗೆ ಆಯ್ಕೆಯಾದ ಕ್ಲಬ್ಬಿನ ಮಾಜಿ ಜಿಲ್ಲಾ ಗವರ್ನರ್ ಡಾ.ಭರತೇಶ್ ಆದಿರಾಜ್, ಜಿಲ್ಲಾ ಸ್ಪೋರ್ಟ್ಸ್ ಚೇರ್ಮನ್ ಆಗಿ ಆಯ್ಕೆಯಾದ ಜಾನ್ ಡಿಸಿಲ್ವ ಹಾಗೂ ದೇವಾಡಿಗ ಸಂಘದ ಯುವ ವಿಭಾಗದ ಅಧ್ಯಕ್ಷರಾಗಿ ಆಯ್ಕೆಯಾದ ಸುಬ್ರಹ್ಮಣ್ಯ ದೇವಾಡಿಗ ಮತ್ತು "ರೋಟರಿ ಪಾರ್ಕಿನಲ್ಲಿ ಭಾವಚಿತ್ರ "ಸ್ಪರ್ಧೆಯಲ್ಲಿ ವಿಜೇತರಾದ ಡಾ. ಆಶಾ ಪಿ. ಹೆಗ್ಡೆ ಇವರನ್ನು ಅಭಿನಂದಿಸಲಾಯಿತು.
ರಾಜೇಶ್ವರಿ ನ್ಯಾಷನಲ್ ಸ್ಕೂಲ್ ನ ಮುಖ್ಯಸ್ಥ ದೇವಿ ಪ್ರಸಾದ್ ಶೆಟ್ಟಿ ಇವರು ರೋಟರಿ ಸಂಸ್ಥೆಗೆ ಸೇರ್ಪಡೆ ಗೊಂಡರು. ರೋಟರಿ ಕ್ಲಬ್ಬಿನ ಮಾಸ ಪತ್ರಿಕೆ 'ಸರ್ವಿಸ್' ಅನ್ನು ಜಿಲ್ಲಾ ಸಹಾಯಕ ಗವರ್ನರ್ ವಿಘ್ನೇಶ್ ಶೆಣೈ ಬಿಡುಗಡೆಗೊಳಿಸಿದರು. ವೃತ್ತಿಪರ ಸೇವಾ ವಿಭಾಗದ ಚೇರ್ಮನ್ ಶೈಲೇಂದ್ರ ರಾವ್ ಉಪಸ್ಧರಿದ್ದರು.
ಪ್ರಭ ನಿರಂಜನ್ ಅತಿಥಿಗಳನ್ನು ಪರಿಚಯಿಸಿದರು. ವಸಂತ್ ಎಂ ಮತ್ತು ಶಿವಕುಮಾರ್ ಸನ್ಮಾನ ಪತ್ರ ವಾಚಿಸಿದರು. ರೇಖಾ ಉಪಾಧ್ಯಾಯ ವಿವಿಧ ಕ್ಲಬ್ ಗಳಿಂದ ಆಗಮಿಸಿದ ಅತಿಥಿಗಳನ್ನು ಪರಿಚಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ಬಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಸ್ವಾಗತಿಸಿ ನಿರೂಪಿಸಿದರು. ಕಾರ್ಯದರ್ಶಿ ಚೇತನ್ ನಾಯಕ್ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಂಗೀತ ಮಿಮಿಕ್ರಿ ವಿವಿಧ ಸ್ಪರ್ಧೆಗಳು ವಿವಿಧ ಸ್ಪರ್ಧೆಗಳು, ಗೊಂಬೆ ನೃತ್ಯ , ಸುಡುಮದ್ದು ಪ್ರದರ್ಶನ ಮೊದಲಾದ ಕಾರ್ಯಕ್ರಮಗಳು ಜರುಗಿದವು.