×
Ad

ಒಗ್ಗಟ್ಟಿನಲ್ಲಿ ಮುನ್ನೆಡೆದರೆ ಸಾಮರಸ್ಯದ ಸಮಾಜ: ಸ್ಪೀಕರ್ ಯು.ಟಿ.ಖಾದರ್

Update: 2025-12-23 23:00 IST

ಕೊಣಾಜೆ: ಸೌಹಾರ್ದತೆಯ ಸಮಾಜವನ್ನು ಜನಪ್ರತಿನಿಧಿಗಳಿಂದ, ಆಡಳಿತ ವ್ಯವಸ್ಥೆಯಿಂದ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಜನರು ಪರಸ್ಪರ ಪ್ರೀತಿ ವಿಶ್ವಾಸದೊಂದಿಗೆ ಒಗ್ಗಟ್ಟಿನಿಂದ ಮುನ್ನಡೆದರೆ ಮಾತ್ರ ಇದು ಸಾಧ್ಯ. ನರಿಂಗಾನ ಸಾಮರಸ್ಯದ ಗ್ರಾಮವಾಗಿ ರೂಪುಗೊಂಡು ಇದೀಗ ಗ್ರಾಮಕ್ಕೆ ಪೂರಕವಾಗಿ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ನರಿಂಗಾನ ಗ್ರಾಮ ಪಂಚಾಯತ್ ವಠಾರದಲ್ಲಿ ಗಾಂಧಿ ಪ್ರತಿಮೆ ಅನಾವರಣ,ಗ್ರಾಮ ವ್ಯಾಪ್ತಿಯ ಬೋಳದಲ್ಲಿ ನಿರ್ಮಿಸಲಾದ ಸ್ವಚ್ಛ ಸಂಕೀರ್ಣ ಮತ್ತು ಮಲತ್ಯಾಜ್ಯ ಘಟಕ ಉದ್ಘಾಟನೆ,ಆಶಾ ಕಾರ್ಯಕರ್ತೆಯರಿಗೆ ಸ್ಕೂಟರ್ ಹಸ್ತಾಂತರ,ಹಕ್ಕುಪತ್ರ ವಿತರಣೆ,ನೀರಿನ ಟ್ಯಾಂಕ್ ಉದ್ಘಾಟನೆ,ವಿಶೇಷ ಚೇತನರಿಗೆ ಚೆಕ್ ವಿತರಣೆ ಸೇರಿದಂತೆ ನರಿಂಗಾನ ಗ್ರಾಮದಲ್ಲಿ ಐದು ಕೋಟಿ ಅನುದಾನದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಂಗಳವಾರದಂದು ಉದ್ಘಾಟಿಸಿ ಅವರು ಮಾತನಾಡಿದರು.

ಉಳ್ಳಾಲ ಕ್ಷೇತ್ರದಲ್ಲಿ 20 ಕೋಟಿ ಅನುದಾನದಲ್ಲಿ ಸೈಬರ್ ಸೆಕ್ಯೂರಿಟಿ ಜಾರಿಗೆ ತರಲು ಯೋಚಿಸಲಾಗಿದ್ದು ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ.ಇದು ಜಾರಿಯಾದಲ್ಲಿ ಅಪರಾಧ ಸಹಿತ ಎಲ್ಲಾ ರೀತಿಯ ಸಮಸ್ಯೆಗಳಿಗೂ ಕಡಿವಾಣ ಹಾಕಲು ಸಾಧ್ಯ. ನರಿಂಗಾನ ಗ್ರಾಮಸ್ಥರಿಗೆ ಈ ಮೊದಲು ನೀಡಿದ ಭರವಸೆಯಂತೆ 24 ಗಂಟೆ ಕುಡಿಯುವ ನೀರು, ರಸ್ತೆ, ಶಿಕ್ಷ‌ಣ ಸೇರಿದಂತೆ ಇನ್ನಿತರ ಅಭಿವೃದ್ಧಿ ಕೆಲಸಗಳು ನರಿಂಗಾನ ಗ್ರಾಮದಲ್ಲಿ ನಡೆದು ಗ್ರಾಮವು ಅಭಿವೃದ್ಧಿ ಹಂತಕ್ಕೆ ತಲುಪಿದೆ ಎಂದರು.

ಗ್ರಾಮದಲ್ಲಿ ಜನಪ್ರತಿನಿಧಿಗಳು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದರೂ ಅದನ್ನು ಅನುಷ್ಟಾನಗೊಳಿಸಿ ಮುಂದೆಯೂ ಕಾಪಾಡಿಕೊಂಡು ಹೋಗುವ ಜವಬ್ಧಾರಿ ಗ್ರಾಮಸ್ಥರದ್ದು. ಆಶಾ ಕಾರ್ಯಕರ್ತೆಯರಿಗೆ ಉಚಿತವಾಗಿ ದ್ವಿಚಕ್ರ ವಾಹನ ಕೊಡಿಸುವ ವ್ಯವಸ್ಥೆಯನ್ನು ನರಿಂಗಾನ ಗ್ರಾಮ ಪಂಚಾಯತ್ ಮಾಡಿದ್ದು ಇದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.

ದುಶ್ಚಟ ಮುಕ್ತ ದ್ವೇಷ ಮುಕ್ತ, ಕಸಮುಕ್ತ ಗ್ರಾಮಗಳನ್ನಾಗಿ ರೂಪಿಸುವುದೇ ನಮ್ಮ ಉದ್ದೇಶವಾಗಿದೆ. ಜನಶಿಕ್ಷಣ ಟ್ರಸ್ಟ್ ಅವರ ಸಹಕಾರದೊಂದಿಗೆ ಅನೇಕ ಯೊಜನೆಗಳ ಅನುಷ್ಠಾನ‌ ಕುರಿತು ಚರ್ಚಿಸಲಾಗಿದೆ ಎಂದರು.

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಡಿಎಸ್ ಗಟ್ಟಿ ಅವರು ಮಾತನಾಡಿ, ಗ್ರಾಮಕ್ಕೆ ಪೂರಕವಾಗಿ ಯು.ಟಿ.ಖಾದರ್ ಅವರ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯಕ್ರಮಗಳು ನರಿಂಗಾನ ಗ್ರಾಮದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ ಎಂದರು. ಪಂಚಾಯಿತಿ ಅಧ್ಯಕ್ಷ ನವಾಝ್ ನರಿಂಗಾನ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ನವಾಝ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಉಪಾಧ್ಯಕ್ಷೆ ಜ್ಯೋತಿ ಡಿಸೋಜ, ನರಿಂಗಾನ ಲವ ಕುಶ ಜೋಡುಕರೆ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಗ್ಯಾರಂಟಿ ಸಮಿತಿಯ ಜಿ.ಪಂ. ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಬೋಳಿಯಾರ್ ಗ್ರಾ.ಪಂ. ಮಾಜಿ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಮಂಗಳೂರು ತಾ.ಪಂ. ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿ,‌ ಬೋಳ ಸಂತ ಲಾರೆನ್ಸ್ ದೇವಾಲಯದ ಧರ್ಮಗುರು ರೆ.ಪಾ.ಪೀಟರ್ ಡಿಸೋಜ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಲೋಕೋಪಯೋಗಿ ಇಲಾಖೆಯ ಅಧಿಕಾರಿ ವೀರೇಂದ್ರ, ಬಂಟ್ವಾಳ ಉಪವಿಭಾಗ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ತಾರನಾಥ ಸಾಲಿಯನ್ ಪಿ., ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಿಕಟಪೂರ್ವ ಪಿಡಿಓ ರಜನಿ ಉಪಸ್ಥಿತರಿದ್ದರು.

ಪಿಡಿಒ ಶ್ವೇತಾ ಕೆ. ವಿ. ಸ್ವಾಗತಿಸಿದರು. ಕಾರ್ಯದರ್ಶಿ ಎ.ಕೆ.ನಳಿನಿ ಸನ್ಮಾನಪತ್ರ ವಾಚಿಸಿ, ವಂದಿಸಿದರು. ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾಯಿ ಕಾರ್ಯಕ್ರಮ ನಿರೂಪಿಸಿದರು.

"ಆರೋಗ್ಯ ಮತ್ತು ಶೈಕ್ಷಣಿಕ ಹಬ್ ಎನಿಸಿರುವ ಮಣಿಪಾಲ ಮತ್ತು ಕೊಣಾಜೆ ನಡುವೆ ಈ ಹಿಂದೆ ರೂಪಿಸಲಾಗಿದ್ದ ನಾಲೇಜ್ ಕಾರಿಡಾರ್ ಯೋಜನೆಯಡಿ ಮುಂದಿನ ದಿನಗಳಲ್ಲಿ ಮೆಟ್ರೋ ಯೋಜನೆ ಅನುಷ್ಠಾನಗೊಳಿಸಲಾಗುವುದು".

- ಯು.ಟಿ.ಖಾದರ್, ವಿಧಾನಸಭಾ ಅಧ್ಯಕ್ಷರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News