×
Ad

ವಿಟ್ಲ: ಹಾವು ಕಡಿದು ಯುವಕ ಮೃತ್ಯು

Update: 2024-11-18 20:39 IST

ವಿಟ್ಲ: ಸಮೀಪದ ಮಂಗಳಪದವು ಮಾಮೇಶ್ವರದಲ್ಲಿ ವಿಷಪೂರಿತ ಹಾವು ಕಡಿದ ಪರಿಣಾಮ ಯುವಕನೋರ್ವ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಪೆರುವಾಯಿಯ ಸುರೇಶ್ ನಾಯ್ಕ(40) ಮೃತರು ಎಂದು ಗುರುತಿಸಲಾಗಿದೆ. 

ಮಾಮೇಶ್ವರದಲ್ಲಿ ಗೆಳೆಯನ ಮನೆಯಲ್ಲಿ ವಾಸವಿದ್ದ ಸುರೇಶ್‌ಗೆ ಕುಡಿತದ ಚಟವಿತ್ತು. ಮಾಮೇಶ್ವರದ ಪಕ್ಕದ ಮನೆಯಲ್ಲಿ ಹಾವು ಹಾವು ಎಂದು ಕೂಗಿದ ಸ್ವರ ಕೇಳಿದ ಈತ ಹಾವನ್ನು ಕೈಯಲ್ಲಿ ಹಿಡಿದಿದ್ದಾನೆ. ಈ ವೇಳೆ ಅದು ಕಚ್ಚಿದ್ದರೂ ಚಿಕಿತ್ಸೆ ಮಾಡದೇ ಕಂಠಪೂರ್ತಿ ಕುಡಿದು ಮಲಗಿದ್ದಾನೆ ಎಂದು ತಿಳಿದುಬಂದಿದ್ದು, ಮಲಗಿದಲ್ಲೇ ರವಿವಾರ ರಾತ್ರಿ ಮೃತಪಟ್ಟಿರುವುದಾಗಿ ದೂರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News