ಮಲೇಷ್ಯಾ ಪ್ರಧಾನಿಯನ್ನು ಭೇಟಿ ಮಾಡಿದ ಅಬ್ದುಲ್ ಹಕೀಂ ಅಝ್‌ಹರಿ ನೇತೃತ್ವದ ತಂಡ
Update: 2025-08-08 19:46 IST
ಮಂಗಳೂರು, ಆ.8:ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹೀಂ ಅವರನ್ನು ಮರ್ಕಝ್ ನಾಲೇಜ್ ಸಿಟಿಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಮುಹಮ್ಮದ್ ಅಬ್ದುಲ್ ಹಕೀಂ ಅಝ್‌ಹರಿ ನೇತೃತ್ವದ ತಂಡವು ಶುಕ್ರವಾರ ಭೇಟಿ ಮಾಡಿತು.
ರಾಜಧಾನಿ ಕೌಲಾಲಂಪುರದ ಪುತ್ರ ಜಯದಲ್ಲಿರುವ ನಶ್ರುಲ್ ಕುರಾನ್ ಸಂಸ್ಥೆಯಲ್ಲಿ ಭೇಟಿ ಮಾಡಿದ ತಂಡವು ಮಲೇಷ್ಯಾದ ಪ್ರಧಾನಿಯೊಂದಿಗೆ ಆರೋಗ್ಯ, ಶಿಕ್ಷಣ ಹಾಗೂ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚಿಸಿತು.
ಈ ಸಂದರ್ಭದಲ್ಲಿ ದಿ ನ್ಯಾಶನಲ್ ಕಮಿಷನ್ ಫಾರ್ ಅಲ್ಲೈಡ್ ಆ್ಯಂಡ್ ಹೆಲ್ತ್‌ಕೇರ್ ಕರ್ನಾಟಕ ರಾಜ್ಯಾಧ್ಯಕ್ಷ ಯು.ಟಿ. ಇಫ್ತಿಕಾರ್ ಫರೀದ್ ಮತ್ತಿತರರು ಉಪಸ್ಥಿತರಿದ್ದರು.