ಸಿಬಿಎಸ್‌ಇ ಅಂಡರ್ -19 ಕ್ರಿಕೆಟ್ ತಂಡಕ್ಕೆ ಅಬ್ದುಲ್ ರಹಿಮಾನ್ ಆಯ್ಕೆ
Update: 2025-11-24 23:26 IST
ಮಂಗಳೂರು: ಮುಂಬರುವ ನ್ಯಾಶನಲ್ ಸ್ಕೂಲ್ ಗೇಮ್ಸ್(ಎಸ್‌ಜಿಪಿಐ)ನ ರಾಷ್ಟ್ರಮಟ್ಟದ ಕ್ರಿಕೆಟ್ ಟೂರ್ನಮೆಂಟ್‌ಗೆ ಸಿಬಿಎಸ್‌ಇ ಅಂಡರ್ -19 ಕ್ರಿಕೆಟ್ ತಂಡಕ್ಕೆ ಹೆಬ್ಬಾಳದ ಜೈನ್ ಹೆರಿಟೇಜ್ ಸ್ಕೂಲ್‌ನ ವಿದ್ಯಾರ್ಥಿ ಅಬ್ದುಲ್ ರಹಿಮಾನ್ ಆಯ್ಕೆಯಾಗಿದ್ದಾರೆ.
ಎಸ್‌ಜಿಪಿಐ ಕ್ರಿಕೆಟ್ ಟೂರ್ನಮೆಂಟ್ ಡಿಸೆಂಬರ್‌ನಲ್ಲಿ ಚಂಡೀಗಢದಲ್ಲಿ ನಡೆಯಲಿದೆ. ಅಬ್ದುಲ್ ರಹಿಮಾನ್ ಅವರು ಬೆಂಗಳೂರಿನ ಗೋವಿಂದಪುರದ ಉಮರ್‌ನಗರ ನಿವಾಸಿಯಾಗಿರುವ ಅಬ್ದುಲ್ ರವೂಫ್ -ರೇಷ್ಮಾ ಬಾನು ದಂಪತಿಯ ಪುತ್ರ.