ಅಬ್ದುಲ್ ರಹಿಮಾನ್ ಕಿನ್ನಿಗೋಳಿ ನಿಧನ
Update: 2025-05-21 15:41 IST
ಮಂಗಳೂರು, ಮೇ 21: ನಗರದ ಜೆಪ್ಪು ನಿವಾಸಿ ಅಬ್ದುಲ್ ರಹಿಮಾನ್ ಕಿನ್ನಿಗೋಳಿ(63) ಬುಧವಾರ ಮಧ್ಯಾಹ್ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಅಂತ್ಯ ಸಂಸ್ಕಾರವು ಇಂದು(ಮೇ 21) ಇಶಾ ನಮಾಝ್ ಬಳಿಕ ಬೋಳಾರ ಮಸೀದಿಯ ದಫನ ಭೂಮಿಯಲ್ಲಿ ನೆರವೇರಲಿದೆ ಎಂದು ಮೃತರ ಸಹೋದರ ಅಬ್ದುಲ್ ಹಮೀದ್ ಕಿನ್ನಿಗೋಳಿ ತಿಳಿಸಿದ್ದಾರೆ.
25 ವರ್ಷಗಳಿಗಿಂತಲೂ ಅಧಿಕ ಕಾಲ ಸೌದಿ ಅರಬಿಯಾದಲ್ಲಿ ಉದ್ಯೋಗದಲ್ಲಿದ್ದ ಅಬ್ದುಲ್ ರಹಿಮಾನ್ ಅವರು 2007ರಲ್ಲಿ ಸ್ವದೇಶಕ್ಕೆ ಆಗಮಿಸಿದ್ದರು. ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು.