ಸುರತ್ಕಲ್: ಬದ್ರಿಯಾ ಹೆಲ್ತ್ ಲೀಗ್‌ನ 38 ನೇ ವಾರ್ಷಿಕೋತ್ಸವದ ಅಂಗವಾಗಿ ಸಾಧಕರಿಗೆ ಸನ್ಮಾನ
ಸುರತ್ಕಲ್: ಬದ್ರಿಯಾ ಹೆಲ್ತ್ ಲೀಗ್ (ರಿ) ಇದರ 38 ನೇ ವಾರ್ಷಿಕೋತ್ಸವದ ಅಂಗವಾಗಿ ಡಿ.26 ರಂದು ನಡೆದ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಸಾಮಾಜಿಕ ಕ್ಷೇತ್ರ ಹಾಗೂ ಕಬಡ್ಡಿ,ಕುಸ್ತಿ ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ಬದ್ರಿಯಾ ಹೆಲ್ತ್ ಲೀಗ್ (ರಿ) ನ ಮಾಜಿ ಅಧ್ಯಕ್ಷ ಝುಲ್ಫಿಕರ್ ಅಲಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬದ್ರಿಯಾ ಹೆಲ್ತ್ ಲೀಗ್ (ರಿ) ಇದರ ಮಾಜಿ ಅಧ್ಯಕ್ಷ ನ್ಯಾಯವಾದಿ ಜೀಶನ್ ಅಲಿ ಅವರು ಸ್ವಾಗತಿಸಿದರು.
ಸಾಮಾಜಿಕ ಸೇವೆಗಾಗಿಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಝಿಯಾವುದ್ದಿನ್, ಮಂಡ್ಯ ಜಿಲ್ಲೆಯ ಕುಸ್ತಿಪಟು ನಟರಾಜ್, ಹಿರಿಯ ಕುಸ್ತಿಪಟು ಹಾಗೂ ಮಾರ್ಗದರ್ಶಕ ಅಬ್ದುಲ್ ಹಮೀದ್, ಪ್ರಥಮ ಬಾರಿ ತುಳುನಾಡ ಕುಮಾರ ಪ್ರಶಸ್ತಿ ಪಡೆದ ಜಿಲ್ಲೆಯ ಮುಸ್ಲಿಂ ಕುಸ್ತಿಪಟು ನಶಾಲ್ ಅಹ್ಮದ್, ಹಲವು ಪ್ರಶಸ್ತಿ ವಿಜೇತ ಬದ್ರಿಯಾ ಹೆಲ್ತ್ ಲೀಗ್ ಸಂಸ್ಥೆಯ ಕುಸ್ತಿಪಟು ಇಶಾಮ್, ಪ್ರಥಮ ಬಾರಿ ಮಾಸ್ಟರ್ ಶಿವಾಜಿ ಪ್ರಶಸ್ತಿ ಗೆದ್ದ ಬದ್ರಿಯಾ ಹೆಲ್ತ್ ಲೀಗ್ ಸಂಸ್ಥೆಯ ಕುಸ್ತಿಪಟು ಅಬ್ದುಲ್ಲಾ ಸಹದ್, ರಾಜ್ಯ ಮಟ್ಟದ ಸ್ಕ್ವೇ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಆಯಿಷತುಲ್ ನಾಫಿಯ, ವಿಶ್ವಕಪ್ ಕಬಡ್ಡಿ ಪಂದ್ಯಾಟದಲ್ಲಿ ವಿಶ್ವ ಚಾಂಪಿಯನ್ ಕಬಡ್ಡಿ ತಂಡದಲ್ಲಿ ಆಟವಾಡಿದ ಧನ ಲಕ್ಷ್ಮಿ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಇನಾಯತ್ ಅಲಿ (ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ, ಕರ್ನಾಟಕ), ನಾಸೀರ್ ಲಕ್ಕಿಸ್ಟಾರ್ (ಚೇರ್‌ಮೆನ್, ದ.ಕ. ಜಿಲ್ಲಾ ವಕ್ಸ್ ಸಲಹಾ ಸಮಿತಿ), ಉಸ್ಮಾನ್ ಫಾಳಿಲಿ (ಖತೀಬರು, ಕೇಂದ್ರ ಜುಮ್ಮಾ ಮಸೀದಿ, ಸುರತ್ಕಲ್), ಪ್ರಮೋದ್ ಕುಮಾರ್ (ಪೊಲೀಸ್ ನಿರೀಕ್ಷಕರು, ಸುರತ್ಕಲ್ ಪೊಲೀಸ್ ಠಾಣೆ), ಎಚ್.ಎನ್.ಬಾಲಕೃಷ್ಣ (ಪೊಲೀಸ್ ನಿರೀಕ್ಷಕರು, ಮಹಿಳಾ ಪೊಲೀಸ್ ಠಾಣೆ,ಮಂಗಳೂರು), ಹಾರುನ್ ರಶೀದ್ (ಅಧ್ಯಕ್ಷರು, ಬದ್ರಿಯಾ ಹೆಲ್ತ್ ಲೀಗ್ (ರಿ) ಸುರತ್ಕಲ್), ಎಸ್.ಕೆ. ಮುಸ್ತಾಫ ಹಾಜಿ (ಅಧ್ಯಕ್ಷರು, ಎಂ.ಜಿ.ಎಂ., ಇ.ಜೆ.ಎಮ್. ಸುರತ್ಕಲ್), ಲುಕ್ಮಾನ್ ಬಂಟ್ವಾಳ (ಸದಸ್ಯರು, ಬಂಟ್ವಾಳ ಪುರಸಭೆ), ಸೈದುದ್ದೀನ್ ಬಜ್ಜೆ (ಸಂಚಾಲಕರು, ಗ್ಲೋಬಲ್ ಇಂಟರ್‌ನ್ಯಾಶನಲ್ ಸ್ಕೂಲ್,ಮಂಗಳೂರು), ಸುರೇಶ್ಚಂದ್ರ ಶೆಟ್ಟಿ (ಗೌರವಾಧ್ಯಕ್ಷರು, ದ.ಕ.ಜಿಲ್ಲಾ ಅಮೆಚೂರ್ ಕುಸ್ತಿ ಸಂಘ, ಮಂಗಳೂರು), ನಯನ ಕೋಟ್ಯಾನ್ (ನಿಕಟಪೂರ್ವ ಸದಸ್ಯರು, ಮಂಗಳೂರು ಮಹಾನಗರ ಪಾಲಿಕೆ), ಬಿ.ಕೆ. ಇಮ್ಮಿಯಾಝ್ (ಜಿಲ್ಲಾಧ್ಯಕ್ಷರು, ಡಿ.ವೈಎಫ್.ಐ ದ.ಕ.ಜಿಲ್ಲೆ), ಟಿ.ಎ. ಶಾನವಾಝ್ (ಅಧ್ಯಕ್ಷರು, ಬಿ.ಜೆ.ಪಿ. ಅಲ್ಪಸಂಖ್ಯಾತ ಮೋರ್ಚಾ ದ.ಕ.ಜಿಲ್ಲೆ), ಶ್ರೀಕಾಂತ್ ಸಾಲ್ಯಾನ್ (ಅಧ್ಯಕ್ಷರು, ಮೀನುಗಾರಿಕಾ ಘಟಕ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ), ಅನ್ಸಾಫ್ ತಡಂಬೈಲ್ (ಉದ್ಯಮಿ, ಅಲ್-ಜುಬೈಲ್ ಕೆ.ಎಸ್.ಎ) ಉಪಸ್ಥಿತರಿದ್ದರು.