ಮಂಗಳೂರು: ಯುನೈಟೆಡ್ ಲೀಗಲ್ ರಿಸರ್ಚ್ ಅಂಡ್ ಜಸ್ಟಿಸ್ ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ಹಿರಿಯ ವಕೀಲ ಬಿ. ಇಬ್ರಾಹಿಂ ಆಯ್ಕೆ
ಮಂಗಳೂರು : ಯುನೈಟೆಡ್ ಲೀಗಲ್ ರಿಸರ್ಚ್ ಅಂಡ್ ಜಸ್ಟಿಸ್ ಟ್ರಸ್ಟ್ (ರಿ) ಮಂಗಳೂರು ಇದರ 2025-2027 ನೇ ಸಾಲಿನ ನೂತನ ಅಧ್ಯಕ್ಷರಾಗಿ ಹಿರಿಯ ವಕೀಲರು ಮಾಜಿ ರಾಜ್ಯ ಸಭಾ ಸದಸ್ಯರಾದ ಬಿ. ಇಬ್ರಾಹಿಂ ಆಯ್ಕೆಯಾಗಿದ್ದಾರೆ.
ಯುನೈಟೆಡ್ ಲೀಗಲ್ ರಿಸರ್ಚ್ ಅಂಡ್ ಜಸ್ಟಿಸ್ ಟ್ರಸ್ಟ್ (ರಿ) ಮಂಗಳೂರು ಇದರ 2025-2027 ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯು ಮಂಗಳೂರಿನ ಇಹ್ಸಾನ್ ಸಭಾಂಗಣ ದಲ್ಲಿ ಡಿ. 20 ರಂದು ನಡೆಯಿತು.
ಪ್ರಸತ್ತುತ ಮಹಾಸಭೆಯಲ್ಲಿ ಅಧ್ಯಕ್ಷರಾಗಿ ಹಿರಿಯ ವಕೀಲರು, ಮಾಜಿ ರಾಜ್ಯ ಸಭಾ ಸದಸ್ಯರಾದ ಬಿ. ಇಬ್ರಾಹಿಂ, ಉಪಾಧ್ಯಕ್ಷರಾಗಿ ಕರ್ನಾಟಕ ಸರಕಾರ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಬಿ. ಎ. ಮುಹಮ್ಮದ್ ಹನೀಫ್, ಹಿರಿಯ ವಕೀಲರಾದ ಅಬ್ದುಲ್ ಅಝೀಝ್, ಹೈಕೋರ್ಟ್ ವಕೀಲರಾದ ಮುಜಾಫರ್ ಅಹಮ್ಮದ್, ಪ್ರಧಾನ ಕಾರ್ಯದರ್ಶಿಯಾಗಿ ಕೆ. ಪಿ. ಶುಕೂರ್, ಕೋಶಾಧಿಕಾರಿಯಾಗಿ ಸರ್ಫರಾಜ್, ಕಾರ್ಯದರ್ಶಿಯಾಗಿ ಇಸ್ಮಾಯಿಲ್ ನೆಲ್ಯಾಡಿ, ಅಶ್ರಫ್ ಅಗ್ನಾಡಿ, ಬಿ ಮುಕ್ತಾರ್ ಅಹಮ್ಮದ್, ಕಬೀರ್ ಕೆಮ್ಮಾರ, ಜೀಶಾನ್ ಅಲಿ, ಮುಹಮ್ಮದ್ ಅಸ್ಗರ್ ಮುಡಿಪು, ಕಾರ್ಯಕ್ರಮ ಸಂಯೋಜಕರಾಗಿ ಶೇಕ್ ಇಶಾಕ್, ಇಮ್ತಿಯಾಜ್ ಬಂಟ್ವಾಳ ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರದಾನ ಕಾರ್ಯದರ್ಶಿ ಕೆ. ಪಿ. ಶುಕೂರ್ ವರದಿ ವಾಚಿಸಿದರು. ಲೆಕ್ಕ ಮಂಡನೆ ಹಾಗೂ ಸ್ವಾಗತವನ್ನು ಸರ್ಫರಾಜ್ ರವರು ನೆರವೇರಿಸಿದರು.