ಅಡ್ಕರೆಪಡ್ಪು: ಹೋಪ್ ಕಂಪೆನಿಯಿಂದ ಗ್ರೀನ್ ವೀವ್ ಶಾಲೆಗೆ ಕ್ರೀಡಾ ಸಾಮಗ್ರಿಗಳ ಕೊಡುಗೆ
Update: 2023-12-13 11:12 IST
ಮಂಗಳೂರು, ಡಿ.13: ಮಂಗಳೂರಿನ ಹೋಪ್ ಕಂಪೆನಿಯವರು ಅಡ್ಕರೆಪಡ್ಪುವಿನಲ್ಲಿರುವ ಜಮೀಯ್ಯತುಲ್ ಫಲಾಹ್ ಅಧೀನದ ಗ್ರೀನ್ ವೀವ್ ವಿದ್ಯಾ ಸಂಸ್ಥೆಗೆ ಹಲವಾರು ಕ್ರೀಡೋಪಕರಣಗಳನ್ನು ಕೊಡುಗೆಯಾಗಿ ನೀಡಿದರು.
ಶಾಲಾ ಸಂಚಾಲಕ ಪರ್ವೇಝ್ ಅಲಿಯವರು ಹೋಪ್ ಕಂಪೆನಿಯವರ ಕೊಡುಗೆಯನ್ನು ಶಾಲೆಯಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಸ್ವೀಕರಿಸಿದರು.
ಹೋಪ್ ಕಂಪೆನಿಯ ನಿಸಾರ್, ಆಜ್ಮಲ್, ಇಕ್ಬಾಲ್, ಸಮ್ರಾ ಅಜ್ಮಲ್ ಹಾಗೂ ಆದಂ ಬ್ಯಾರಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ನಮಿತಾ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎವ್ಲಿನ್ ಡಿಸೋಜ, ದಿಪೋಜಿ, ಸಲಾಂ, ಖಲೀಲ್ ಮತ್ತು ಎಂ.ಕೆ.ಅಶ್ರಫ್ ಉಪಸ್ಥಿತರಿದ್ದರು.
ದೀಪೋಜಿ ವಂದಿಸಿದರು.