×
Ad

ಅಡ್ಯಾರ್: ಫ್ಯಾಕ್ಟರಿಯಲ್ಲಿ ಅಗ್ನಿ ಅನಾಹುತ

Update: 2023-07-20 21:15 IST

ಸಾಂದರ್ಭಿಕ ಚಿತ್ರ

ಮಂಗಳೂರು, ಜು.20: ನಗರ ಹೊರಲವಯದ ಅಡ್ಯಾರ್‌ನಲ್ಲಿರುವ ‘ಸಿಯಾಳ ಐಸ್ ಕ್ರೀಂ ಫ್ಯಾಕ್ಟರಿ’ಯೊಂದರಲ್ಲಿ ಗುರುವಾರ ಅಗ್ನಿ ಅನಾಹುತ ಸಂಭವಿಸಿರುವುದಾಗಿ ವರದಿಯಾಗಿದೆ. ಇದರಿಂದ ಫ್ಯಾಕ್ಟರಿಯಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು ಎಂದು ತಿಳಿದುಬಂದಿದೆ.

ಗುರುವಾರ ಮಧ್ಯಾಹ್ನದ ವೇಳೆ ಫ್ಯಾಕ್ಟರಿಯ ರೆಫ್ರಿಜರೇಟರ್‌ನಲ್ಲಿ ಬೆಂಕಿ ಉಂಟಾಗಿ ದಟ್ಟ ಹೊಗೆ ಕಾಣಿಸಿಕೊಂಡಿವೆ. ತಕ್ಷಣ ಅಲ್ಲಿದ್ದ ಕಾರ್ಮಿಕರು ಮತ್ತು ಸ್ಥಳೀಯರು ಬೆಂಕಿ ನಂದಿಸಿದ್ದಾರೆ ಎಂದು ತಿಳಿದು ಬಂದಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅನಾಹುತ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News