×
Ad

ಅಡ್ಯಾರ್ ಕಣ್ಣೂರು: ಬಸ್ ಕಂಡೆಕ್ಟರ್-ಪ್ರಯಾಣಿಕರ ಮಧ್ಯೆ ಹೊಡೆದಾಟ

Update: 2023-09-27 21:10 IST

ಮಂಗಳೂರು, ಸೆ.27: ಖಾಸಗಿ ಸಿಟಿ ಬಸ್ಸೊಂದರ ಕಂಡೆಕ್ಟರ್ ಮತ್ತು ಪ್ರಯಾಣಿಕರ ಮಧ್ಯೆ ಹೊಡೆದಾಟ ನಡೆದ ಘಟನೆ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಯಾರ್ ಕಣ್ಣೂರಿನಲ್ಲಿ ಮಂಗಳವಾರ ಸಂಜೆ ಸಂಭವಿಸಿರುವುದಾಗಿ ವರದಿಯಾಗಿದೆ.

ನಗರದ ಸ್ಟೇಟ್‌ಬ್ಯಾಂಕ್‌ನಿಂದ ಅಡ್ಯಾರ್ ಕಣ್ಣೂರಿಗೆ ಸಂಜೆ ಸುಮಾರು 6:15ಕ್ಕೆ ತೆರಳುತ್ತಿದ್ದ ಬಸ್ಸನ್ನು ಪ್ರಯಾಣಿಕರೊಬ್ಬರು ಕಣ್ಣೂರು ಚೆಕ್‌ಪೋಸ್ಟ್‌ಗಿಂತ ತಲುಪುವ ಮುನ್ನವೇ ನಿಲ್ಲಿಸುವಂತೆ ಕಂಡೆಕ್ಟರ್ ಬಳಿ ಹೇಳಿದರು ಎನ್ನಲಾಗಿದೆ. ಆದರೆ ಕಂಡೆಕ್ಟರ್ ಅಲ್ಲಿ ನಿಲ್ಲಿಸಲು ಒಪ್ಪಲಿಲ್ಲ ಎಂದು ಹೇಳಲಾಗಿದೆ. ಹಾಗಾಗಿ ಬಸ್ ಕಂಡೆಕ್ಟರ್ ಮತ್ತು ಪ್ರಯಾಣಿಕನ ಮಧ್ಯೆ ಮಾತಿನ ಚಕಮಕಿ ನಡೆದು ಹೊಡೆದಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಕಂಡೆಕ್ಟರ್ ಮತ್ತು ಪ್ರಯಾಣಿಕ ಪರಸ್ಪರ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಸ್ ಸಂಚಾರ ಸ್ಥಗಿತ

ಕೃತ್ಯವನ್ನು ಖಂಡಿಸಿ ಬಸ್ ಸಿಬ್ಬಂದಿ ವರ್ಗವು ಬಸ್ ಸಂಚಾರ ಸ್ಥಗಿತಗೊಳಿಸಿ ಬುಧವಾರ ಅಡ್ಯಾರ್‌ಕಟ್ಟೆಯಲ್ಲಿ ಪ್ರತಿಭಟನೆ ನಡೆಸಿದರು. ಇದರಿಂದ ಪ್ರಯಾಣಿಕರು ತೊಂದರೆಗೀಡಾದರು. ಪೊಲೀಸರು ಮಧ್ಯಪ್ರವೇಶಿಸಿ ಪ್ರಯಾಣಿಕರನ್ನು ಸರಕಾರಿ ಬಸ್ಸಿನಲ್ಲಿ ಸಂಚರಿಸಲು ಅನುವು ಮಾಡಿಕೊಟ್ಟರು ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News