×
Ad

ಹಳೆಯಂಗಡಿ: 3 ದಿನಗಳಿಂದ ಏರ್ ಟೆಲ್ ನೆಟ್ ವರ್ಕ್ ಸಮಸ್ಯೆ

Update: 2023-11-02 22:43 IST

ಮುಲ್ಕಿ, ನ.2: ಇಲ್ಲಿನ ಹಳೆಯಂಗಡಿ ಪ್ರದೇಶದಲ್ಲಿ ‌ಮೂರು ದಿನಗಳಿಂದ ಏರ್ಟೆಲ್ ನೆಟ್ವರ್ಕ್ ಸಮಸ್ಯೆ ಎದುರಾಗಿದ್ದು, ಗ್ರಾಹಕರು ಫೋನ್, ಇಂಟರ್‌ನೆಟ್‌ ಬಳಸಲಾಗದೆ ಕಂಗಾಲಾಗಿದ್ದಾರೆ.

ಕಳೆದ ರವಿವಾರದಂದು ರಾತ್ರಿ ಬಾರೀ ಗುಡುಗು ಮಿಂಚಿನೊಂದಿಗೆ ಮಳೆಯಾಗಿತ್ತು. ಆ ಬಳಿಕ ಸೋಮವಾರದಿಂದ ಈ ಭಾಗದಲ್ಲಿ ನೆಟ್ವರ್ಕ್ ನಲ್ಲಿ ಸಮಸ್ಯೆ ಎಂದುರಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ತಂತ್ರಜ್ಞಾನ ಮುಂದುವರಿದಿದ್ದು, ಈ ಭಾಗದ ಅಂಗಡಿ ಮುಂಗಟ್ಟುಗಳು, ಗ್ರಾಹಕರು ಡಿಜಿಟಲ್ ಪೇಮೆಂಟ್ ಗಳನ್ನೇ ಆಶ್ರಯಿಸಿದ್ದು, ಸದ್ಯ ಇಂಟರ್‌ನೆಟ್ ಸಮಸ್ಯೆಯಿಂದಾಗಿ ಗ್ರಾಹಕರು ಮತ್ತು ಅಂಗಡಿದಾರರೂ ಕಂಗಾಲಾಗುವಂತೆ ಮಾಡಿದೆ.

ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯ ಅಝೀಝ್ ಐ.ಎ.ಕೆ. ಬೊಳ್ಳೂರು, ಹಳೆಯಂಗಡಿ ಪೇಟೆಯಲ್ಲಿ ಕಳೆದ ಮೂರು ದಿನಗಳಿಂದ ಏರ್ ಟೆಲ್ ನೆಟ್ ವರ್ಕ್ ಇಲ್ಲ. ಇದರಿಂದಾಗಿ ಮೊಬೈಲ್ ನಲ್ಲಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್ ವ್ಯವಹಾರಗಳಿಗೂ ತೊಂದರೆಯಾಗುತ್ತಿದೆ. ಸಂಬಂಧ ಪಟ್ಟವರು ಶೀಘ್ರ ದುರಸ್ತಿಕಾರ್ಯ ನಡೆಸಿ ನಾಗರೀಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ‌.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News