×
Ad

ಎಐಯು ದಕ್ಷಿಣ-ಪೂರ್ವ ವಲಯ ಅಂತರ್ ವಿವಿ ಫುಟ್ಬಾಲ್ ಟೂರ್ನಮೆಂಟ್; ಯೆನೆಪೋಯ ವಿವಿ ಚಾಂಪಿಯನ್

Update: 2026-01-13 19:59 IST

ಮಂಗಳೂರು, ಜ.13: ವಾಕ್ಸೆನ್ ವಿಶ್ವವಿದ್ಯಾನಿಲಯ ಹೈದರಾಬಾದ್ ಆಶ್ರಯದಲ್ಲಿ ಜ.10ರಂದು ಹೈದರಾಬಾದ್‌ ನಲ್ಲಿ ನಡೆದ ಎಐಯು ದಕ್ಷಿಣ-ಪೂರ್ವ ವಲಯ ಅಂತರ್ ವಿವಿ ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಮಂಗಳೂರಿನ ಯೆನೆಪೋಯ ವಿಶ್ವವಿದ್ಯಾನಿಲಯವು ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಈ ಗೆಲುವಿನೊಂದಿಗೆ ಯೆನೆಪೋಯ ವಿಶ್ವವಿದ್ಯಾಲಯವು ಜನವರಿ 30ರಿಂದ ಫೆಬ್ರವರಿ 8, 2026ರವರೆಗೆ ಕೊಲ್ಕತ್ತಾ, ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಫುಟ್ಬಾಲ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದೆ.

2022-23ರಿಂದ ಎಐಯು ಫುಟ್ಬಾಲ್ ಸ್ಪರ್ಧೆಯನ್ನು ನಾಲ್ಕು ವಲಯಗಳಿಂದ ಎಂಟು ವಲಯಗಳಾಗಿ ವಿಸ್ತರಿಸಿದ ನಂತರ ಯೆನೆಪೋಯಾ ವಿಶ್ವವಿದ್ಯಾಲಯವು ನಿರಂತರವಾಗಿ ವಲಯ ಚಾಂಪಿಯನ್ ಆಗಿ ಅಖಿಲ ಭಾರತ ಮಟ್ಟಕ್ಕೆ ಅರ್ಹತೆ ಪಡೆಯುತ್ತಿದೆ.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಯೆನೆಪೋಯ ವಿಶ್ವವಿದ್ಯಾಲಯವು ಬೆಂಗಳೂರಿನ ಸೈಂಟ್ ಜೋಸೆಫ್ ವಿಶ್ವವಿದ್ಯಾಲಯ ತಂಡವನ್ನು 3-0 ಗೋಲುಗಳಿಂದ ಮಣಿಸಿ ಲೀಗ್ ಹಂತಕ್ಕೆ ಪ್ರವೇಶಿಸಿತು.

ಲೀಗ್ ಪಂದ್ಯಗಳಲ್ಲಿ ಯೆನೆಪೋಯ ವಿಶ್ವವಿದ್ಯಾಲಯವು ಭರ್ಜರಿ ಪ್ರದರ್ಶನ ನೀಡಿತು: ತೆಲಂಗಾಣದ ಒಸ್ಮಾನಿಯಾ ವಿಶ್ವವಿದ್ಯಾಲಯ ವಿರುದ್ಧ 5-1 ಗೋಲುಗಳ ಗೆಲುವು, ಛತ್ತೀಸ್‌ಗಢ್ ಹೇಮಚಂದ್ ಯಾದವ್ ವಿಶ್ವವಿದ್ಯಾನಿಲಯ ವಿರುದ್ಧ 2-0 ಗೆಲುವು ಪಂ. ರವಿಶಂಕರ್ ಶುಕ್ಲ ವಿಶ್ವವಿದ್ಯಾಲಯ ವಿರುದ್ಧ 12-0 ಭರ್ಜರಿ ಗೆಲುವಿನೊಂದಿಗೆ ಮೂರು ಪಂದ್ಯಗಳಲ್ಲಿ 9 ಅಂಕಗಳನ್ನು ಪಡೆದ ಯೆನೆಪೋಯಾ ವಿಶ್ವವಿದ್ಯಾನಿಲಯ ಲೀಗ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿತು. ಹೇಮಚಂದ್ ಯಾದವ್ ವಿಶ್ವವಿದ್ಯಾನಿಲಯ ಎರಡನೇ ಸ್ಥಾನವನ್ನು , ಒಸ್ಮಾನಿಯಾ ವಿಶ್ವವಿದ್ಯಾನಿಲಯ ಮೂರನೇ ಸ್ಥಾನ ಮತ್ತು ಪಂ. ರವಿಶಂಕರ್ ಶುಕ್ಲ ವಿಶ್ವವಿದ್ಯಾನಿಲಯ ನಾಲ್ಕನೇ ಸ್ಥಾನ ಗಳಿಸಿದೆ. ಎಲ್ಲ ನಾಲ್ಕು ತಂಡಗಳು ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಫುಟ್ಬಾಲ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿವೆ.

ಯೆನೆಪೋಯ ವಿಶ್ವವಿದ್ಯಾನಿಲಯದ ತಂಡಕ್ಕೆ ಮುಖ್ಯ ಕೋಚ್ ಬಿ.ಬಿ ಥಾಮಸ್ ಮತ್ತು ಫಿಸಿಯೋಥೆರಪಿಸ್ಟ್ ನಿತಿನ್ ಮಾರ್ಗದರ್ಶನ ನೀಡಿದ್ದರು. ಯೆನೆಪೋಯ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ವಿಭಾಗಾಧ್ಯಕ್ಷ ಸುಜಿತ್ ಕೆ.ವಿ. ಅವರು ತಂಡದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದರು.

ಏಳು ದಿನಗಳ ಕಾಲ ನಡೆದ ಈ ಚಾಂಪಿಯನ್‌ಶಿಪ್ 2026ರ ಜನವರಿ 10ರಂದು ಹೈದರಾಬಾದ್‌ನ ಯಶಸ್ವಿಯಾಗಿ ಮುಕ್ತಾಯಗೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News