×
Ad

ತಂಡದಿಂದ ಹಲ್ಲೆ, ಜಾತಿ ನಿಂದನೆ ಆರೋಪ: ಪ್ರಕರಣ ದಾಖಲು

Update: 2023-09-24 21:47 IST

ಉಪ್ಪಿನಂಗಡಿ: ಜಗಳವನ್ನು ಬಿಡಿಸಲು ಹೋದಾಗ ತಂಡವೊಂದು ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಕ್ಕಿಲಾಡಿಯ ಹರೀಶ ನಾಯ್ಕ (30) ಎಂಬವರು ದೂರು ನೀಡಿದ್ದು, ಸೆ.23ರಂದು ಸಂಜೆ ಉಪ್ಪಿನಂಗಡಿ ಪೇಟೆಯಲ್ಲಿರುವ ಹಳೆಯ ಕಟ್ಟಡದ ಮೇಲ್ಚಾವಣಿಯ ಕೆಲಸಕ್ಕೆ ಸಂಬಂಧಿಸಿದಂತೆ ಜಗಜೀವನ್ ರೈ, ಭವಿಷ್, ಸಂದೀಪ್ ಎಂಬವರು ಸುದರ್ಶನ್ ಕುಮಾರ್ ಎಂಬವರಿಗೆ ಹಲ್ಲೆ ನಡೆಸಿದ್ದು, ಈ ವೇಳೆ ತಾನು ಹಾಗೂ ರಮಾನಂದ ಎಂಬವರೊಂದಿಗೆ ಜಗಳ ಬಿಡಿಸಲು ಹೋದಾಗ ಆರೋಪಿಗಳಾದ ಜಗಜೀವನ್ ರೈ, ಭವಿಷ್ ಹಾಗೂ ಸಂದೀಪ್ ಎಂಬವರು ತನಗೆ ಅವ್ಯಾಚ್ಯವಾಗಿ ಬೈದು, ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ತನ್ನನ್ನು ಹಾಗೂ ರಮಾನಂದ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News