×
Ad

ವರದಕ್ಷಿಣೆ ಕಿರುಕುಳ ಆರೋಪ: ನ್ಯಾಯಾಲಯಕ್ಕೆ ದೂರು

Update: 2023-11-15 23:02 IST

ಮಂಗಳೂರು : ಪತಿ ಹಾಗೂ ಆತನ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿರುವುದಾಗಿ ಮಂಗಳೂರಿನ 6ನೇ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಕೆ.ಪಿ.ಟಿ ವ್ಯಾಸ ನಗರದ ಕೀರ್ತಿ ಪೈ ಅವರು ದೂರು ನೀಡಿದ್ದಾರೆ.

ಮೂಲತಃ ಕೇರಳದ ಕುಂಬಳೆ ನಿವಾಸಿಗಳಾಗಿದ್ದು ವ್ಯಾಸ ನಗರದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ಪತಿ ಚೇತನ್ ವಿ.ಭಕ್ತ, ನಾದಿನಿ ಚೈತ್ರಾ ವಿ.ಭಕ್ತ, ಅತ್ತೆ ಪೂರ್ಣಿಮಾ ಭಕ್ತ ಹಾಗೂ ಮಾವ ವೇಣು ಗೋಪಾಲ್ ಭಕ್ತ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

2022 ಡಿ.18ರಂದು ವಿವಾಹವಾಗಿದ್ದು, ಆರಂಭದಲ್ಲಿ ಸರಿಯಾಗಿಯೇ ಇದ್ದ ಕುಟುಂಬಸ್ಥರು ಕ್ರಮೇಣ ಸಂಶಯದಿಂದ ಕಾಣಲಾರಂಭಿಸಿದ್ದಾರೆ. ಬಳಿಕ ಹೆಚ್ಚು ವರದಕ್ಷಿಣೆ ತರುವಂತೆ ಮಾನಸಿಕ ಕಿರುಕುಳ ನೀಡಿದ್ದಾರೆ. ದೈಹಿಕ ಹಿಂಸೆಯನ್ನೂ ನೀಡಿದ್ದಾರೆ ಎಂದು ಸಂತ್ರಸ್ತೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News