×
Ad

ತ್ಯಾಜ್ಯ ಮಿಶ್ರಿತ ನೀರು ತೋಡಿಗೆ ಬಿಡುತ್ತಿರುವ ಆರೋಪ: ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು

Update: 2023-07-27 23:05 IST

ವಿಟ್ಲ: ಕೇಪು ಗ್ರಾಮದ ಕುದ್ದುಪದವು ಖಾಸಗಿ ಜಾಗದ ಮೂಲಕ ಟ್ಯಾಂಕರ್ ನಲ್ಲಿ ತಂದ ತ್ಯಾಜ್ಯ ಮಿಶ್ರಿತ ನೀರನ್ನು ತೋಡಿಗೆ ಬಿಡುತ್ತಿರುವ ಬಗ್ಗೆ ಗ್ರಾಮ ಪಂಚಾಯತ್ ನೀಡಿದ ದೂರಿನ ಪ್ರಕಾರ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ವ್ಯಕ್ತಿಗಳ ಸಹಕಾರದೊಂದಿಗೆ ಕೇರಳ ಭಾಗದಿಂದ ತ್ಯಾಜ್ಯ ಮಿಶ್ರಿತ ನೀರನ್ನು ಕರ್ನಾಟಕದ ಗಡಿಯೊಳಗೆ ತರಲಾಗುತ್ತಿದ್ದು, ಕರ್ನಾಟಕದ ನೀರಿನ ಮೂಲಗಳಿಗೆ ಸೇರಿಸುವ ಕಾರ್ಯ ಮಾಡಲಾಗುತ್ತಿದೆ. ಸ್ಥಳೀಯ ವ್ಯಕ್ತಿಗಳು ಹಣದ ಆಸೆಯಿಂದ ಈ ವಾಹನವನ್ನು ತಮ್ಮ ಖಾಸಗೀ ಜಾಗಕ್ಕೆ ತರಿಸಿಕೊಂಡು ಯಾರಿಗೂ ತಿಳಿಯದಂತೆ ತೋಡಿನ ನೀರಿಗೆ ಸೇರಿಸುವ ಕಾರ್ಯ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಕೇಪು ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಟ್ಯಾಂಕರ್ ಅನ್ನು ವಶಕ್ಕೆ ಪಡೆದು ಪೊಲೀಸ್‌ ಠಾಣೆ ಹಸ್ತಾಂತರಿಸಿದ್ದಾರೆ. ಘಟನೆಯ ಬಗ್ಗೆ ವಿಟ್ಲ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News