×
Ad

ಕಾಮಗಾರಿಯ ನೆಪ ಹೇಳಿ ಜೋಕಟ್ಟೆ ರೈಲ್ವೇ ಗೇಟ್ ಬಂದ್ ಆರೋಪ: ಸಂಸದರಿಗೆ ಮನವಿ ಸಲ್ಲಿಸಿದ ಸ್ಥಳೀಯ ನಿಯೋಗ

Update: 2025-01-08 13:48 IST

ಸುರತ್ಕಲ್: ಕಾಮಗಾರಿಯ ನೆಪಹೇಳಿ ಜೋಕಟ್ಟೆ ಕ್ರಾಸ್ ಬಳಿ ರೈಲ್ವೇ ಗೇಟ್ ಮುಚ್ಚಿರುವ ಕುರಿತು ಜೋಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಫಾರೂಕ್ ಬೊಟ್ಟು ನೇತೃತ್ವದ ನಿಯೋಗವು ದಕ್ಷಿಣ ಕನ್ನಡ ಜಿಲ್ಲಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಭೇಟಿ ಮಾಡಿತು.

ಕಾಮಗಾರಿಯ ನೆಪ ಹೇಳಿ  ರೈಲ್ವೇ ಗೇಟ್ ಮುಚ್ಚಿದರೆ ಸಾರ್ವಜನಿಕರು, ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರಿಗೆ ತೊಂದರೆಯಾಗಲಿದೆ. ಹಾಗಾಗಿ ರೈಲ್ವೆ ಗೇಟ್ ಮುಚ್ಚದಂತೆ ಹಾಗೂ ಅಪೂರ್ಣ ಅಂಡರ್ ಪಾಸನ್ನು ವೈಜ್ಞಾನಿಕವಾಗಿ ನಿರ್ಮಿಸಿ ಜನರ ಸಮಸ್ಯೆಯನ್ನು ಬಗೆಹರಿಸಬೇಕಾಗಿ ನಿಯೋಗವು ಮನವಿ ಮಾಡಿತು.

ಈ ವೇಳೆ ನಿಯೋಗಕ್ಕೆ ಭರವಸೆ ನೀಡಿದ ಸಂಸದರು, ಸೂಕ್ತ ರೀತಿಯಲ್ಲಿ ಸಮಸ್ಯೆ ನಿಭಾಯಿಸಿ ಪರಿಹಾರ ಕಲ್ಪಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಜೋಕಟ್ಟೆ ಗ್ರಾಮ ಪಂಚಾಯತ್ ಸದಸ್ಯ ಫಯಾಝ್ ಬಿ.ಕೆ, ಮಾಜಿ ಉಪಾಧ್ಯಕ್ಷ ಸಂಶುದ್ದೀನ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಬಿ .ಎಸ್. ಬಶೀರ್ ಅಹ್ಮದ್, ಬಿಜೆಪಿ ಜಿಲ್ಲಾ ಕಾರ್ಮಿಕರ ಪ್ರಕೋಷ್ಠ ಅಧ್ಯಕ್ಷ ಜಯಂತ್ ಸಾಲಿಯಾನ್, ಬಿಜೆಪಿ ಮೂಲ್ಕಿ- ಮೂಡಬಿದ್ರಿ ಕ್ಷೇತ್ರ ಅಧ್ಯಕ್ಷ ದಿನೇಶ್ ಪುತ್ರನ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುನಿಲ್ ಆಳ್ವ, ಬಿಜೆಪಿ ಬಜ್ಪೆ ಶಕ್ತಿ ಕೇಂದ್ರದ ಅಧ್ಯಕ್ಷ ವಿಜಯ ಕುಮಾರ್ ಉಪಸ್ಥಿತರಿದ್ದರು.

.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News