×
Ad

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘ ಬಂಟ್ವಾಳ ಉಪಸಮಿತಿಯ ವಾರ್ಷಿಕ ಮಹಾಸಭೆ

Update: 2023-10-07 18:32 IST

ಬಂಟ್ವಾಳ : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘ ರಿ. ಬೆಂಗಳೂರು ಇದರ ಬಂಟ್ವಾಳ ಉಪ ಸಮಿತಿ ವಾರ್ಷಿಕ ಮಹಾಸಭೆಯು ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ಶನಿವಾರ ನಡೆಯಿತು.

ಕ.ರಾ.ಅ.ವಿ.ಗು.ಸಂಘ ಬಂಟ್ವಾಳ ಉಪಸಮಿತಿ ಅಧ್ಯಕ್ಷ ಪಿ.ಸುಬ್ರಹ್ಮಣ್ಯ ರಾವ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಉಪಾಧ್ಯಕ್ಷ ಉರ್ಬಾನ್ ಪಿಂಟೊ, ಜಿಲ್ಲಾಧ್ಯಕ್ಷ ಕುಶಲ ಪೂಜಾರಿ , ಜಿಲ್ಲಾ ಕಾರ್ಯದರ್ಶಿ ಪುರುಷೋತ್ತಮ ಪಿ., ಜಿಲ್ಲಾ ಸಮಿತಿ ಸಂಘಟನಾ ಕಾರ್ಯದರ್ಶಿ ಎನ್.ಎ.ಯೂಸುಫ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ರವೀಂದ್ರ ಸಪಲ್ಯ ಅತಿಥಿ ಗಳಾಗಿ ಭಾಗವಹಿಸಿದ್ದರು. ಏಲಬೆ ಪದ್ಮನಾಭ ಮಯ್ಯ ಸ್ವಾಗತಿಸಿ, ಎನ್.ಎ.ಯೂಸುಫ್ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಬಿ.ಪರಮೇಶ್ವರ ಲೆಕ್ಕ ಪತ್ರ ಮಂಡಿಸಿದರು. ಉಪಾಧ್ಯಕ್ಷ ಇಬ್ರಾಹಿಂ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News