×
Ad

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನಲ್ಲಿ ಮೇ 25 ರವರೆಗೆ ಆಂಟಿಕ್ ಆಭರಣಗಳ ಪ್ರದರ್ಶನ

Update: 2025-05-21 23:14 IST

ಮಂಗಳೂರು: ನಗರದ ಫಳ್ನೀರ್‌ನ ಪ್ರತಿಷ್ಠಿತ ಆಭರಣಗಳ ಮಳಿಗೆ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನಲ್ಲಿ ಆಂಟಿಕ್ (ಪ್ರಾಚೀನ) ಆಭರಣಗಳ ಪ್ರದರ್ಶನ ಆರಂಭಗೊಂಡಿದ್ದು, ಮೇ 25ರ ತನಕ ಮುಂದುವರಿಯಲಿದೆ.

ಮಹಾರಾಷ್ಟ್ರದ ತ್ರಿಶಾ ಪೇಂಟಿಂಗ್ ಕಂಟ್ರಾಕ್ಟರ್ ಸಂಧ್ಯಾ ಎಸ್ ಪೂಜಾರಿ ಮತ್ತು ಮೇಕಪ್ ಆರ್ಟಿಸ್ಟ್ ಅಸ್ಮೀನಾ ಬಿಲಾಲ್ ಮುಖ್ಯ ಅತಿಥಿಗಳಾಗಿ ಆಂಟಿಕ್ ಆಭರಣಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಮಂಗಳೂರು ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಮಂಗಳೂರು ಸ್ಟೋರ್ ಹೆಡ್ ಶರತ್ ಚಂದ್ರನ್ ಮತ್ತು ಶೋ ರೂಂ ಮ್ಯಾನೇಜರ್ ರಘುರಾಮ್ ಸಿಎಸ್ ಮತ್ತು ಆಡಳಿತ ಮಂಡಳಿಯ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್, ದೇಶದ ಅತಿದೊಡ್ಡ ಆಭರಣ ಗ್ರೂಪ್‌ಗಳಲ್ಲಿ ಒಂದಾಗಿದೆ. ಆಂಟಿಕ್ ಆಭರಣಗಳ ಪ್ರದರ್ಶನಲ್ಲಿ ಆಕರ್ಷಕ ಮತ್ತು ಅಪರೂಪದ ಸಂಗ್ರಹಗಳನ್ನು ಪ್ರದರ್ಶಿಸಲಾಗುತ್ತದೆ.

ವಧುವಿನ ಸಮಕಾಲೀನ ಮತ್ತು ಸಾಂಪ್ರದಾಯಿಕ ಆಭರಣಗಳು. ಆಂಟಿಕ್ ಜ್ಯುವೆಲ್ಲರಿ ಶೋದಲ್ಲಿ ಇರುತ್ತವೆ.

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಬಗ್ಗೆ:

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಬಿಐಎಸ್ ಪ್ರಮಾಣೀಕೃತ ಭಾರತೀಯ ಆಭರಣಗಳ ಸಮೂಹ ಸಂಸ್ಥೆಯಾಗಿದೆ. ಕೇರಳದ ಕೋಝಿಕ್ಕೋಡ್‌ನಲ್ಲಿ 1993ರಲ್ಲಿ ಈ ಸಂಸ್ಥೆಯನ್ನು ಎಂ.ಪಿ. ಅಹಮದ್ ಸ್ಥಾಪಿಸಿದ್ದರು. ಈ ಕಂಪೆನಿಯು ಪ್ರಸ್ತುತ 13 ದೇಶಗಳಲ್ಲಿ 400ಕ್ಕೂ ಅಧಿಕ ಶೋರೂಮ್‌ಗಳನ್ನು ಹೊಂದಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News