ಕಲ್ಲಡ್ಕ: ಅನುಗ್ರಹ ಮಹಿಳಾ ಪದವಿ ಕಾಲೇಜು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ
ಬಂಟ್ವಾಳ: ಕಲ್ಲಡ್ಕ ಅನುಗ್ರಹ ಮಹಿಳಾ ಪದವಿ ಕಾಲೇಜಿನ 2025-26ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು.
ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲೆ ಡಾ.ಹೇಮಲತಾ ಬಿ.ಡಿ. ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಬ್ಯಾಡ್ಜ್ ವಿತರಿಸಿ ಮಾತನಾಡಿದ ಅವರು ತಮ್ಮ ನಾಯಕತ್ವದ ಅವಧಿಯಲ್ಲಿ ಶಿಸ್ತು, ಸಂಯಮ, ಪಾರದರ್ಶಕತೆ, ನ್ಯಾಯ ಮತ್ತು ಎಲ್ಲರನ್ನೂ ಸಮಾನವಾಗಿ ಕಾಣುವ ಮೂಲಕ ಕಾಲೇಜಿನ ಪ್ರತಿಯೊಂದು ಕಾರ್ಯಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಾ, ಕಾಲೇಜಿನ ಘನತೆ ಗೌರವವನ್ನು ಹೆಚ್ಚಿಸಬೇಕು ಎಂದರು.
ಅನುಗ್ರಹ ಸಲಹಾ ಸಮಿತಿಯ ಕಾರ್ಯದರ್ಶಿ ತಾರಾಕ್ಷಿ, ಪದವಿಪೂರ್ವ ವಿಭಾಗದ ಸಂಯೋಜಕಿ ಮಮಿತಾ ಎಸ್ ರೈ, ಪದವಿ ವಿಭಾಗದ ಸಂಯೋಜಕಿ ಆಬಿದಾ. ಬಿ, ಸಲಹಾ ಸಮಿತಿಯ ಸದಸ್ಯ ನವ್ಯ, ಶಫಿಕಾ ಮತ್ತು ಚುನಾವಣಾ ಸಾಕ್ಷರತಾ ಸಂಘದ ಮುಖ್ಯಸ್ಥೆ ಗ್ಲೋರಿಯ ದಿವ್ಯ ಲೋಬೊ, ಕಾಲೇಜಿನ ಭೋಧಕ-ಬೋಧಕೇತರವರ್ಗದವರು, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ದ್ವಿತೀಯ ಬಿಎ ವಿಭಾಗದ ವಿದ್ಯಾರ್ಥಿನಿ ಕುಮಾರಿ ಶಮ ಶಹರಿನ್ ಸ್ವಾಗತಿಸಿ, ಪ್ರಥಮ ಬಿಕಾಂ ವಿದ್ಯಾರ್ಥಿನಿ ಕುಮಾರಿ ಬಸ್ರ ಬಾನು ಕಿರಾಅತ್ ಪಠಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ತೃತೀಯ ಬಿ.ಕಾಂ ವಿಭಾಗದ ವಿದ್ಯಾರ್ಥಿನಿ ಕುಮಾರಿ ಮಹಶುಕ ವಂದಿಸಿದರು, ತೃತೀಯ ಬಿಕಾಂ ವಿಭಾಗದ ವಿದ್ಯಾರ್ಥಿನಿ ಕುಮಾರಿ ಮಶೀದ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳು:
ಅಧ್ಯಕ್ಷೆಯಾಗಿ ಮಹಶುಕ (ತೃತೀಯ ಬಿಕಾಂ), ಕಾರ್ಯದರ್ಶಿಯಾಗಿ ಸಾರಾ ಶಹಮಾ (ತೃತೀಯ ಬಿಎ), ಶಿಸ್ತು ಮಂತ್ರಿಯಾಗಿ ಜಸೀನ ಬಾನು (ತೃತೀಯ ಬಿಕಾಂ) ಸಾಂಸ್ಕೃತಿಕ ಮಂತ್ರಿಯಾಗಿ ಕುಮಾರಿ ಫಾತಿಮಾತ್ ರಫೀಯ (ತೃತೀಯ ಬಿಕಾಂ), ಆರೋಗ್ಯ ಮಂತ್ರಿಯಾಗಿ ನುಸೈಬ ಬಾನು (ತೃತೀಯ ಬಿಕಾಂ), ಕ್ರೀಡಾ ಮಂತ್ರಿಯಾಗಿ ಆಯಿಷಾತ್ ಅನ್ಸಿಫಾ (ತೃತೀಯ ಬಿಕಾಂ) ಸಾಹಿತ್ಯ ಸಮಾಜ ಮಂತ್ರಿಯಾಗಿ ಫಾತಿಮತ್ ಜುಮೈಲಾ ( ತೃತೀಯ ಬಿ.ಎ) ಅಧಿಕಾರ ಸ್ವೀಕರಿಸಿದರು.
ತರಗತಿ ಪ್ರತಿನಿಧಿಗಳಾಗಿ ಅವ್ವಮ್ಮ ಅಪ್ರ ಪ್ರಥಮ ಬಿಎ, ಸಾಹಲ ಫಾತಿಮಾ ಪ್ರಥಮ ಬಿಕಾಂ, ಕುಮಾರಿ ಜಾಸ್ಮಿನ್ ಪ್ರಥಮ ಬಿಸಿಎ, ಸಫ್ರೀನ ಬಾನು ದ್ವಿತೀಯ ಬಿಎ, ಫಾತಿಮ ಲೆಫಮ ದ್ವಿತೀಯ ಬಿಕಾಂ ಆಯ್ಕೆಯಾದರು.