ಮಾದಕ ವಸ್ತು ಮಾರಾಟಕ್ಕೆ ಯತ್ನ; ಆರೋಪಿಯ ಬಂಧನ: ಸೊತ್ತು ವಶ
Update: 2025-12-04 00:14 IST
ಮಂಗಳೂರು, ಡಿ.3: ನಗರದ ಮೈದಾನವೊಂದರ ಬಳಿ ಎಂಡಿಎಂಎ ಮಾದಕ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಬಂದರ್ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಮುಹಮ್ಮದ್ ಫಾಯಿಕ್ ಬಂಧಿತ ಆರೋಪಿ. ಈತ ನಗರದ ಮೈದಾನದ ಬಳಿ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡಲು ಬರುತ್ತಿರುವುದಾಗಿ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದರು.
ಆರೋಪಿಯಿಂದ ಸುಮಾರು 45,000 ರೂ. ಮೌಲ್ಯದ ಎಂಡಿಎಂಎ, ಸಿಗರೇಟ್‌ಪ್ಯಾಕೆಟ್, ಬ್ಯಾಗ್, 10,000 ರೂ. ಮೌಲ್ಯದ ಮೊಬೈಲ್ ಪೋನ್‌ನ್ನು ವಶಪಡಿಸಲಾಗಿದೆ. ಮುಹಮ್ಮದ್ ಫಾಯಿಕ್‌ನಿಗೆ ಮುಹಮ್ಮದ್ ಜುನೈದ್ ಎಂಡಿಎಂಎ ಮಾರಾಟ ಮಾಡಿರುವುದು ತನಿಖೆಯ ವೇಳೆ ಬಯಲಿಗೆ ಬಂದಿದೆ. ಆತನ ವಿರುದ್ದವೂ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.