×
Ad

ಆ.30: ಉದ್ಯೋಗ ಜಾಗೃತಿ ಕಾರ್ಯಕ್ರಮ

Update: 2023-08-29 18:12 IST

ಮಂಗಳೂರು,ಆ.29: ಇಲ್ಮ್ ಇಂಡಿಯಾ ಮಂಗಳೂರು ಇದರ ವತಿಯಿಂದ ಸರಕಾರಿ ಉದ್ಯೋಗ ಜಾಗೃತಿ ಕಾರ್ಯಕ್ರಮವು ಆ.30ರಂದು ಮಧ್ಯಾಹ್ನ 2:30ಕ್ಕೆ ನಗರದ ಬದ್ರಿಯಾ ಕಾಲೇಜ್ ಆವರಣದಲ್ಲಿ ನಡೆಯಲಿದೆ.

ಸರಕಾರಿ ಉದ್ಯೋಗದ ಬಗ್ಗೆ ಅಲ್ಪಸಂಖ್ಯಾತ ಸಮುದಾಯದಲ್ಲಿ ನಿರ್ಲಕ್ಷ್ಯವಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ದಿಂದ ‘ಇಲ್ಮ್ ಇಂಡಿಯಾ’ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮವನ್ನು ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸುವರು. ಬದ್ರಿಯಾ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷತೆ ಪಿ.ಸಿ. ಹಾಶಿರ್ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಯಾಗಿ ಯು.ಟಿ. ಇಫ್ತಿಕಾರ್ ಅಲಿ ಭಾಗವಹಿಸಲಿದ್ದಾರೆ.

ಸರಕಾರಿ ಉದ್ಯೋಗದ ಬಗ್ಗೆ ಇಲ್ಮ್ ಇಂಡಿಯಾದ ಅಧ್ಯಕ್ಷ ಮುಹಮ್ಮದ್ ನಾಸಿರ್ ಸಜೀಪ ಮತ್ತು ಯೆನೆಪೋಯ ನಾಗರಿಕ ಸೇವಾ ತರಬೇತಿ ಸಂಸ್ಥೆಯ ತರಬೇತುದಾರ ಮುಹಮ್ಮದ್ ಅಲಿ ರೂಮಿ ಮಾಹಿತಿ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News