ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಬಂಟ್ವಾಳ : ಬಿ.ಸಿ.ರೋಡ್ ಸಮೀಪದ ಮುಹಿಯ್ಯುದ್ದೀನ್ ಜುಮಾ ಮಸೀದಿ ಇದರ ವತಿಯಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 85 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇಲ್ಲಿನ ಮುಹಿಯ್ಯುದ್ದೀನ್ ಸಭಾ ಭವನದಲ್ಲಿ ಇತ್ತೀಚಿಗೆ ನಡೆಯಿತು
ಜಮಾಅತ್ ಅಧ್ಯಕ್ಷ ಹಾಜಿ ಮುಹಮ್ಮದ್ ಅದ್ದೇಡಿ ಅಧ್ಯಕ್ಷತೆ ವಹಿಸಿದ್ದರು. ಜಮಾತ್ ಖತೀಬ್ ಕೆ.ಎಂ.ಅಬ್ಬಾಸ್ ಫೈಝಿ ಪುತ್ತಿಗೆ ಉದ್ಘಾಟಿಸಿದರು.ಮುದರ್ರಿಸ್
ಉಮರ್ ಫಾರೂಕ್ ಫೈಝಿ ಪೈವಳಿಕೆ ದುವಾ ನೆರವೇರಿಸಿದರು.
ಉಪನ್ಯಾಸಕ, ಹಾಗೂ ತರಬೇತುದಾರ ಅಬ್ದುಲ್ ರಝಕ್ ಅನಂತಾಡಿ ವಿದ್ಯಾರ್ಥಿಗಳಿಗೆ ಪ್ರೇರಣಾ ತರಬೇತಿಯನ್ನು ನಡೆಸಿಕೊಟ್ಟರು,
ವೇದಿಕೆಯಲ್ಲಿ ಬಂಟ್ವಾಳ ಪುರಸಭಾ ಸದಸ್ಯರಾದ ಮೊಹಮ್ಮದ್ ಶರೀಫ್, ಹಸೈನಾರ್ , ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ಅಧ್ಯಕ್ಷ ಇರ್ಷಾದ್ ಹುಸೈನ್ ದಾರಿಮಿ, ಮಿತ್ತಬೈಲ್ ಜಮಾತ್ ಕಾನೂನು ಸಲಹೆಗಾರ ಅಡ್ವಕೇಟ್ ಹಬೀಬ್ ರಹ್ಮಾನ್, ಜಮಾತ್ ಉಪಾಧ್ಯಕ್ಷ ಫಲುಲ್ ತಂಗಳ್, ಕೋಶಾಧಿಕಾರಿ ಅಬ್ದುಲ್ ರಹ್ಮಾನ್, ಮಾಜಿ ಅಧ್ಯಕ್ಷ ಸಾಗರ್ ಮುಹಮ್ಮದ್, ಕಮಿಟಿ ಸದಸ್ಯರು ಹಾಗು ಜಮಾಅತ್ ವ್ಯಾಪ್ತಿಯ ಸಂಘ ಸಂಸ್ಥೆಗಳ ಪಧಾಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಿತ್ತಬೈಲ್ ಮಸೀದಿಯ ಲೋಗೋ ಅನಾವರಣ ಗೊಳಿಸಲಾಯಿತು.
ಉಮ್ರಾ ಯಾತ್ರೆ ಕೈಗೊಳ್ಳು ತ್ತಿರುವ ಜಮಾತ್ ಜೊತೆ ಕಾರ್ಯದರ್ಶಿ ಮುಹಮ್ಮದ್ ಶಾಕಿರ್ ಶಾಂತಿ ಅಂಗಡಿ, ಮುದರ್ರಿಸ್ ಉಮರ್ ಫಾರೂಕ್ ಫೈಝಿ ಹಾಗು ಇರ್ಷಾದ್ ಹುಸೈನ್ ದಾರಿಮಿ ಅವರನ್ನು ಶುಭ ಹಾರೈಸಿ ಬೀಳ್ಕೊಡಲಾಯಿತು.
ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಸ್ವಾಗತಿಸಿ, ಕಾರ್ಯದರ್ಶಿ ಅಶ್ರಫ್ ವಂದಿಸಿದರು, ಖಲೀಲ್ ವಾಫಿ ಉಸ್ತಾದ್ ಕಾರ್ಯಕ್ರಮ ನಿರೂಪಿಸಿದರು.