×
Ad

ಬಹರೈನ್: ಡಿಕೆಎಸ್ ಸಿ ಯಿಂದ ಡಾ.ವೈ.ಅಬ್ದುಲ್ಲಾ ಕುಂಞಿ, ಡಾ.ಯು.ಟಿ.ಇಫ್ತಿಕಾರ್ ಅಲಿಯವರಿಗೆ ಸನ್ಮಾನ

Update: 2024-09-09 09:49 IST

ಬಹರೈನ್: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಹಾಗೂ ಅಧೀನದ ಡಿಕೆಎಸ್ ಸಿ ಬಹರೈನ್ ರಾಷ್ಟ್ರೀಯ ಸಮಿತಿ ವತಿಯಿಂದ ಯೆನೆಪೊಯ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಯೆನೆಪೊಯ ಅಬ್ದುಲ್ಲ ಕುಂಞಿ ಮತ್ತು ದಿ ನ್ಯಾಶನಲ್ ಕಮಿಷನ್ ಫಾರ್ ಅಲೈಡ್ ಆ್ಯಂಡ್ ಹೆಲ್ತ್ ಕೇರ್ ಇದರ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿಯವರನ್ನು ಸನ್ಮಾನಿಸಲಾಯಿತು.

ಇಲ್ಲಿನ ಹೋಟೆಲ್ ವೆಸ್ಟ್ ಇನ್ ನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಡಿಕೆಎಸ್ ಸಿ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಮುಹಮ್ಮದ್ ಸೀದಿ, ಉಪಾಧ್ಯಕ್ಷ ಹಾತಿಂ ಕೂಳೂರು, ಕಮ್ಯುನಿಕೇಶನ್ ಕಾರ್ಯದರ್ಶಿ ಕೆ.ಎಚ್.ಮುಹಮ್ಮದ್ ರಫೀಕ್ ಸೂರಿಂಜೆ ಹಾಗೂ ಕಾರ್ಯದರ್ಶಿ ಅಬೂಬಕರ್ ಬರ್ವ ಸಮ್ಮುಖದಲ್ಲಿ ಇಬ್ಬರನ್ನೂ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಡಿಕೆಎಸ್ ಸಿ ಬಹರೈನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಉಸ್ತಾದ್ ಅಬ್ದುಲ್ ಮಜೀದ್ ಸಅದಿ, ಉಪಾಧ್ಯಕ್ಷರಾದ ಅಬ್ದುಲ್ಲತೀಫ್ ಕಾಪು ಮತ್ತು ಸಿದ್ದೀಕ್ ಸುಳ್ಯ, ಉಮ್ಮುಲ್ ಹಸ್ಸಾಂ ಘಟಕದ ಅಧ್ಯಕ್ಷ ಫಝಲ್ ಸುರತ್ಕಲ್ ಉಪಸ್ಥಿತರಿದ್ದರು.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News