×
Ad

ಬಂಟ್ವಾಳ | ಅಕ್ರಮ ಗಣಿಗಾರಿಕೆ ಸ್ಥಳಕ್ಕೆ ಪೊಲೀಸರಿಂದ ದಾಳಿ : ಪ್ರಕರಣ ದಾಖಲು

Update: 2025-11-12 22:55 IST

ಬಂಟ್ವಾಳ: ಗುಡ್ಡೆ ಜಮೀನಿನಲ್ಲಿ ಸ್ಫೋಟಕ ಬಳಸಿ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದ ಸ್ಥಳಕ್ಕೆ ಪೂಂಜಾಲಕಟ್ಟೆ ಪೊಲೀಸರು ದಾಳಿ ನಡೆಸಿದ ಘಟನೆ ಬಡಗಕಜೆಕಾರು ಗ್ರಾಮದ ಪಾಂಡವರಕಲ್ಲು ಅಂಬ್ಡೇಲು ಎಂಬಲ್ಲಿ ಮಂಗಳವಾರ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ಪೂಂಜಾಲಕಟ್ಟೆ ಠಾಣಾ ಸಿಬ್ಬಂದಿ ನಾಗರಾಜ್ ಅವರು ಸ್ಥಳಕ್ಕೆ ಭೇಟಿ ನೀಡಿದಾಗ ಇಲ್ಲಿನ ನಿವಾಸಿ ಜಯ ಬಂಗೇರ ಅವರು ಸ್ಫೋಟಕ ವಸ್ತು ಬಳಸಿ ತನ್ನ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ ಮಾಡುತ್ತಿರುವುದು ಕಂಡು ಬಂದಿದೆ.

ಗುಡ್ಡೆ ಜಮೀನಿನಲ್ಲಿ ಕಪ್ಪು ಕಲ್ಲು ಗಣಿಗಾರಿಕೆ ಮಾಡಿರುವುದು ಕಂಡು ಬಂದಿದ್ದು, ಸ್ಥಳದಲ್ಲಿ ಸುಮಾರು 2-3 ಲೋಡು ಕಪ್ಪು ಕಲ್ಲುಗಳಿದ್ದು, ಅಲ್ಲದೆ ಬಂಡೆಯ ಮೇಲೆ 2-3 ಕಡೆಗಳಲ್ಲಿ ಕಂಪ್ರಶರ್ ಬಳಸಿ ತೂತು ಕೊರೆದು ಹೊಡೆದಿರುವುದು ಕಂಡು ಬಂದಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News