×
Ad

ಬಂಟ್ವಾಳ: ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Update: 2023-09-06 12:09 IST

ಬಂಟ್ವಾಳ : ಇಲ್ಲಿನ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯ ಶಿಕ್ಷಕ ಇಬ್ರಾಹಿಂ ಸಲೀಂ ಮಾತನಾಡಿ, ಮಕ್ಕಳೆಂಬ ಮೊಳಕೆಗಳಿಗೆ ಶಿಕ್ಷಣವೆಂಬ ನೀರನ್ನೆರೆದು ಜ್ಞಾನಿಗಳೆಂಬ ಅಮೂಲ್ಯ ಫಸಲನ್ನು ಸಮಾಜಕ್ಕೆ ನೀಡುತ್ತಿರುವವನೇ ಶಿಕ್ಷಕ ಎಂದರು.

ಶಾಲಾ ಆಡಳಿತಾಧಿಕಾರಿ ಅಬ್ದುಲ್ ಸಮದ್ ಹುದವಿ ಮಾತನಾಡಿ ಸಮಾಜದಲ್ಲಿನ ಎಲ್ಲಾ ಹುದ್ದೆಗಳಿಗೆ ಅಡಿಪಾಯವನ್ನು ಹಾಕುವವನೇ ಶಿಕ್ಷಕ ಎಂದು ಶಿಕ್ಷಕರ ಮಹತ್ವ ತಿಳಿಸಿದರು.

 ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಅಬ್ದುಲ್ ಖಾದರ್ ಶಿಕ್ಷಕರಿಗೆ ಶುಭ ಹಾರೈಸಿದರು.

ಇದೇ ವೇಳೆ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆದವು, ಹಾಗೂ ಶಿಕ್ಷಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ವಿದ್ಯಾರ್ಥಿನಿಯರಾದ ಆಯೀಷಾ ಸುಹೈಲ ಸ್ವಾಗತಿಸಿ, ಫಾತಿಮಾ ರಜ್ಮಾ ವಂದಿಸಿದರು. ರಿಫಾ ಫಾತಿಮ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News