ಬಂಟ್ವಾಳ: ಜಮೀಯ್ಯತುಲ್ ಫಲಾಹ್‌ನಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
ಬಂಟ್ವಾಳ: ತಂದೆ-ತಾಯಿ, ಗುರುಗಳು ಮತ್ತು ಕುಟುಂಬಸ್ಥರಿಂದ ಹಲವು ಪ್ರಯೋಜನಗಳನ್ನು ಪಡೆದು ಕೊಂಡಿದ್ದೀರಿ. ಅದನ್ನು ನೀವು ಉತ್ತಮ ಅಂಕ ಗಳಿಸಿ ಮರಳಿಸಬೇಕು ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ ಕೆ. ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜಮಿಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ವತಿಯಿಂದ ಬಿಸಿ ರೋಡ್‌ನ ಲಯನ್ಸ್ ಸೇವಾ ಮಂದಿರದಲ್ಲಿ ಮಂಗಳವಾರ ನಡೆದ ಎಸೆಸ್ಸೆಲ್ಸಿ ವಿದ್ಯಾರ್ಥಿಗಳ ವಿಷಯಾಧಾರಿತ ಪರೀಕ್ಷಾಪೂರ್ವ ತರಬೇತಿ ಕಾರ್ಯಕ್ರಮ ʼಚೈತನ್ಯ ಚಿಲುಮೆ-2026ʼ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಮಿಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ಅಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಪರಮೇಶ್ವರ ಹೆಗಡೆ, ಶೇಕ್ ಆದಂ ಸಾಹೇಬ್, ರೋಶನ್ ಅಲೆಕ್ಸಾಂಡರ್ ಪಿಂಟೋ ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಅಜೀವ ಸದಸ್ಯರಾದ ಹಾಜಿ ಅಹ್ಮದ್ ಖಾನ್ ಕೊಡಾಜೆ, ಸಲೀಂ ಅಲ್ತಾಫ್ ಡೈಮಂಡ್, ಹನೀಫ್ ಹಾಜಿ ಗೋಳ್ತಮಜಲು ಭಾಗವಹಿಸಿದರು. ವೇದಿಕೆಯಲ್ಲಿ ಶಿಕ್ಷಣ ಸಂಯೋಜಕಿ ಸುಧಾ, ಕಾರ್ಯದರ್ಶಿ ಹಕೀಂ ಕಲಾಯಿ, ಕೋಶಾಧಿಕಾರಿ ಲತೀಫ್ ನೇರಳಕಟ್ಟೆ ಉಪಸ್ಥಿತರಿದ್ದರು. ಬಿ.ಮುಹಮ್ಮದ್ ತುಂಬೆ ಕಾರ್ಯಕ್ರಮ ನಿರೂಪಿಸಿದರು. ಕೆ.ಎಸ್. ಮುಹಮ್ಮದ್ ವಂದಿಸಿದರು.