×
Ad

ದಕ್ಷಿಣ ಅಫ್ರಿಕಾದಲ್ಲಿ ಬಂಟ್ವಾಳದ ಯುವಕ ಮೃತ್ಯು; ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ

Update: 2025-04-15 14:17 IST

ಬಂಟ್ವಾಳ : ದಕ್ಷಿಣ ಅಫ್ರಿಕಾಕ್ಕೆ ಉದ್ಯೋಗಕ್ಕೆ ತೆರಳಿದ್ದ ಬಂಟ್ವಾಳದ ಯುವಕನೋರ್ವ ಅಲ್ಲಿ ಅಕಾಲಿಕವಾಗಿ ಮೃತಪಟ್ಟಿದ್ದು, ಇಂದು (ಮಂಗಳವಾರ) ಮೃತ್ಯದೇಹವನ್ನು ಊರಿಗೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ನರಿಕೊಂಬು ಗ್ರಾಮ ನಿವಾಸಿ ರವಿ ಸಪಲ್ಯ ಅವರ ಪುತ್ರ ರಜತ್ (25) ಮೃತಪಟ್ಟ ಯುವಕ. ಕಳೆದ ಕೆಲ ಸಮಯಗಳಿಂದ ರಜತ್ ದಕ್ಷಿಣ ಆಫ್ರಿಕಾದಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದು, ಎ.5ರಂದು ಅಕಾಲಿಕವಾಗಿ ಮೃತಪಟ್ಟಿದ್ದರು ಎನ್ನಲಾಗಿದೆ.

ದ.ಕ.ಸಂಸದ ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜತೆ ಸಂಪರ್ಕ ಸಾಧಿಸಿ ಮೃತದೇಹವನ್ನು ಊರಿಗೆ ತರಲು ಸಹಕರಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News