ಮಂಗಳೂರು | ಬ್ಯಾರೀಸ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ʼAI, ಕಾನೂನು ಮತ್ತು ಪೋಸ್ಟ್ ಕ್ವಾಂಟಮ್ ಕ್ರಿಪ್ಟೋಗ್ರಫಿʼ ಕುರಿತು ಕಾರ್ಯಾಗಾರ
ಮಂಗಳೂರು: ಬ್ಯಾರೀಸ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ) ಮತ್ತು ಬಿಐಟಿ ಐಇಇಇ ವಿದ್ಯಾರ್ಥಿ ಘಟಕದ ಸಹಯೋಗದೊಂದಿಗೆ ʼAI, ಕಾನೂನು ಮತ್ತು ಪೋಸ್ಟ್ ಕ್ವಾಂಟಮ್ ಕ್ರಿಪ್ಟೋಗ್ರಫಿʼ ಕುರಿತ ಕಾರ್ಯಾಗಾರ ಬಿಐಟಿಯ ಅಂತಾರಾಷ್ಟ್ರೀಯ ಸೆಮಿನಾರ್ ಹಾಲ್‌ನಲ್ಲಿ ನಡೆಯಿತು.
ಕಾರ್ಯಾಗಾರದಲ್ಲಿ ಯುಕೆಯ ಕಾರ್ಡಿಫ್ ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯದ ಉಪನ್ಯಾಸಕಿ ಡಾ.ವಿಭುಷಿನಿ ಬೆಂಟೋಟಹೇವಾ ಮತ್ತು ಕಾರ್ಡಿಫ್ ಸ್ಕೂಲ್ ಆಫ್ ಟೆಕ್ನಾಲಜೀಸ್‌ನ ಸಂಶೋಧನಾ ವಿಭಾಗದ ಅಸೋಸಿಯೇಟ್ ಡೀನ್ ಡಾ. ಚಮಿಂದಾ ತುಷಾರ ಹೆವಾಗೆ ಭಾಗವಹಿಸಿದ್ದರು.
ಬಿಐಟಿ ಪ್ರಾಂಶುಪಾಲ ಡಾ. ಎಸ್. ಐ. ಮಂಝೂರ್ ಬಾಷಾ ಅವರ ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಅವರು ಸುರಕ್ಷಿತ ಡಿಜಿಟಲ್ ಸಂವಹನದ ಹೆಚ್ಚುತ್ತಿರುವ ಮಹತ್ವದ ಬಗ್ಗೆ ಮತ್ತು ಕೃತಕ ಬುದ್ಧಿಮತ್ತೆ ಕುರಿತು ಮಾತನಾಡಿದರು.
ಡಾ. ವಿಭುಷಿಣಿ ಅವರು AI ಮತ್ತು ಕಾನೂನು ವ್ಯವಸ್ಥೆಗಳ ಬಗ್ಗೆ ಮಾತನಾಡಿದರು. ತಾಂತ್ರಿಕ ಪ್ರಗತಿಯನ್ನು ನೈತಿಕ ಮತ್ತು ಕಾನೂನು ಚೌಕಟ್ಟುಗಳೊಂದಿಗೆ ಜೋಡಿಸುವ ಮಹತ್ವದ ಬಗ್ಗೆ ಹೇಳಿದರು. ಡಾ. ಚಮಿಂದಾ ತುಷಾರ ಅವರು ಪೋಸ್ಟ್ ಕ್ವಾಂಟಮ್ ಕ್ರಿಪ್ಟೋಗ್ರಫಿ ಬಗ್ಗೆ ಮಾತನಾಡಿದರು.
ಕಾರ್ಯಾಗಾರವನ್ನು ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಅಬ್ದುಲ್ಲಾ ಗುಬ್ಬಿ ಸಂಯೋಜಿಸಿದರು. ಕಾರ್ಯಾಗಾರದಲ್ಲಿ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.