×
Ad

ಬೆಳ್ಳಾರೆ ಝಕರಿಯಾ ಜುಮಾ ಮಸೀದಿ ಆಡಳಿತ ಮಂಡಳಿಗೆ ಚುನಾವಣೆ: 11 ಮಂದಿ ನಿರ್ದೇಶಕರ ಆಯ್ಕೆ

Update: 2023-09-09 23:36 IST

ಬೆಳ್ಳಾರೆ: ಝಕರಿಯಾ ಜುಮಾ ಮಸೀದಿ ಆಡಳಿತ ಮಂಡಳಿ ನಿರ್ದೇಶಕರಾಗಿ 11 ಮಂದಿ ಆಯ್ಕೆಯಾಗಿದ್ದಾರೆ. ಇಂದು ಚುನಾವಣೆ ನಡೆದು ನಿರ್ದೇಶಕರ ಆಯ್ಕೆ ನಡೆಯಿತು.

ಆಡಳಿತ ಮಂಡಳಿ ನಿರ್ದೇಶಕರಾಗಿ ಅಬೂಬಕ್ಕರ್ ಯು. ಎಚ್, ಅಬ್ದುಲ್‌ ಖಾದರ್ ಬಾಯಂಬಾಡಿ, ಅಬ್ದುಲ್‌ ನಾಸೀರ್ ಯು ಎ, ಅಬ್ದುಲ್‌ ರಹಿಮಾನ್‌ ಕೆ , ಹಮೀದ್ ಹೆಚ್, ಎಂ, ಅಜರುದ್ದೀನ್, ಹನೀಪ್ ಎನ್, ಇಸ್ಮಾಯಿಲ್ ಬಿ, ಅಬ್ದುಲ್‌ ಬಶೀರ್, ಹಸೈನಾರ್ ಬಿ, ಹಮೀದ್ ಕೆ ಎಂ ಆಯ್ಮೆಯಾದರು.

11 ಸ್ಥಾನಗಳಿಗಾಗಿ 22 ಮಂದಿ ಕಣದಲ್ಲಿದ್ದರು. ಇಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ಚುನಾವಣೆ ನಡೆಯಿತು.

ಚುನಾವಣೆಯಲ್ಲಿ ಜಮಾಅತಿನ 460 ಸದಸ್ಯರಲ್ಲಿ 411 ಮಂದಿ ಮತ ಚಲಾಯಿಸಿದ್ದರು. ಬಳಿಕ ವಕ್ಪ್ ಅಧಿಕಾರಿಗಳು ಮತ ಎಣಿಕೆ ಪ್ರಕ್ರಿಯೆ ನಡೆಸಿ ಫಲಿತಾಂಶ‌ ಪ್ರಕಟಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News