×
Ad

ಬೆಳ್ತಂಗಡಿ: ಅಕ್ರಮ ರಕ್ತ ಚಂದನ ಸಾಗಾಟ; ಇಬ್ಬರು ಆರೋಪಿಗಳ ಬಂಧನ

Update: 2023-08-11 17:54 IST

ಬೆಳ್ತಂಗಡಿ: ವೇಣೂರು ಸಮೀಪದ ಕರಿಮಣೇಲು ಎಂಬಲ್ಲಿ ವೇಣೂರು ವಲಯಾರಣ್ಯಧಿಕಾರಿ ನೇತೃತ್ವದ ತಂಡವು 125 ಕೆ.ಜಿ. ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ರಕ್ತ ಚಂದನವನ್ನು ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಬಂಟ್ವಾಳ ಮಾವಿನಕಟ್ಟೆ ನಿವಾಸಿ ಖಾಲಿದ್ ಹಾಗೂ ಗುರುವಾಯನಕೆರೆ ನಿವಾಸಿ ದೀಕ್ಷಿತ್ ಎಂದು ಪೊಲೀಸರು ತಿಳಿಸಿದ್ದಾರೆ.

ಇವರು ವೇಣೂರು ಕರಿಮಣೇಲು ಎಂಬಲ್ಲಿಂದ ಅಕ್ರಮವಾಗಿ ರಕ್ತಚಂದನ ಸಾಗಾಟ ನಡೆಸಿದ್ದರು‌. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಲಯಾರಣ್ಯಧಿಕಾರಿ ನೇತೃತ್ವದ ತಂಡ ಆರೋಪಿಗಳು ಸಹಿತ 125 ಕೆ.ಜಿ. ರಕ್ತಚಂದನ ಸಾಗಾಟಕ್ಕೆ ಬಳಸಿದ ವಾಹನ ವಶಕ್ಕೆ‌ ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News