×
Ad

ಬೆಳ್ತಂಗಡಿ| ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿ ದೂರು ನೀಡಲು ಬಂದ ಮಹಿಳೆಗೆ ಎಸ್.ಐ.ಟಿ ಕಚೇರಿಯಲ್ಲಿ ಬೆದರಿಕೆ; ಸ್ಟಾನ್ಲಿ ಆರೋಪ

Update: 2025-09-22 22:37 IST

ಫೈಲ್‌ ಫೋಟೊ 

ಬೆಳ್ತಂಗಡಿ; ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಲು ಬಂದಿದ್ದ ಮಹಿಳೆಯ ದೂರು ಹೇಳಿಕೆ ಪಡೆಯುವ ಕಾರ್ಯವನ್ನು ಮಾಡದೆ, ಮಹಿಳೆಯನ್ನು ಎಸ್.ಐ.ಟಿ ಕಚೇರಿಯಲ್ಲಿ ಇದ್ದ ಇಬ್ಬರು ಅಧಿಕಾರಿಗಳು ಬೆದರಿಸಿರುವುದಾಗಿ ಒಡನಾಡಿ ಸಂಸ್ಥೆಯ ಸ್ಟಾನ್ಲಿ ಸಾಮಾಜಿಕ ಜಾಲತಾಣದ ಮೂಲಕ ಆರೋಪ ವ್ಯಕ್ತಪಡಿಸಿದ್ದಾರೆ.

ಮಂಡ್ಯ ಮೂಲದ ಮಹಿಳೆಯೊಬ್ಬರು ಸೌಜನ್ಯ ಪ್ರಕರಣದ ಬಗ್ಗೆ ಸಾಕ್ಷಿ ನುಡಿಯುವುದಾಗಿ ಹೇಳಿಕೆ ನೀಡಿದ್ದರು. ತಾನು ಸೌಜನ್ಯ ಅಪಹರಣ ವನ್ನು ನೋಡಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಇದಾದ ಬಳಿಕ ಈಕೆ ಎಸ್.ಐ.ಟಿ ಗೆ ಪತ್ರ ಬರೆದಿದ್ದರು. ಈ ಮಹಿಳೆ ತನ್ನ ಹೇಳಿಕೆಯನ್ನು ನೀಡಲು ಸೆ.19 ರಂದು ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಬಂದಿದ್ದರು ಎಂದು ತಿಳಿದುಬಂದಿದೆ.

ಸಾಕ್ಷಿ ಹೇಳಲು ಬಂದ ಮಹಿಳೆಯನ್ನು ಸುಮಾರು 7 ಗಂಟೆಗಳ ಕಾಲ ವಿಚಾರಣೆಯನ್ನು ನಡೆಸಿದ್ದಾರೆ. ಎಸ್.ಐ.ಟಿ ಅಧಿಕಾರಿಗಳು ತೋರಿಸಿದ ವರ್ತನೆ ಸರಿಯಾಗಿರಲಿಲ್ಲ, ಬೆದರಿಕೆ ಹಾಕುವ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಸ್ಟಾನ್ಲಿ ಆರೋಪಿಸಿದ್ದಾರೆ.

ಸಾಕ್ಷಿ ಹೇಳಲು ಬಂದ ಮಹಿಳೆಯನ್ನು ಬೆದರಿಸು ಪ್ರಯತ್ನ ನಡೆಸಿದ್ದಲ್ಲದೆ ಅವರು ಸಾಕ್ಷಿ ಹೇಳದಂತೆ ಮಾಡುವ ಪ್ರಯತ್ನ ನಡೆದಿದೆ ಎಂದು ಒಡನಾಡಿ ಸಂಸ್ಥೆಯ ಸ್ಟಾನ್ಲಿ ಆರೋಪಿಸಿದ್ದು, ಈ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ನೀಡಲು ಮುಂದಾಗಿರುವುದಾಗಿ ಹೇಳಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News