×
Ad

ಬೆಳ್ತಂಗಡಿ | ಕಕ್ಕಿಂಜೆ ಶಾಲೆಯಲ್ಲಿ ಮಕ್ಕಳ ಮೇಲೆ ಹೆಜ್ಜೇನು ದಾಳಿ: 10 ಮಂದಿ ಅಸ್ವಸ್ಥ

Update: 2025-02-18 11:32 IST

ಬೆಳ್ತಂಗಡಿ: ಕಕ್ಕಿಂಜೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಮೇಲೆ ಹೆಜ್ಜೇನು ದಾಳಿ ನಡೆಸಿದ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ. ಇದರಿಂದ ಸುಮಾರು 10 ಮಕ್ಕಳು ಅಸ್ವಸ್ಥರಾಗಿದ್ದು , ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಮಕ್ಕಳು ಶಾಲೆಯಲ್ಲಿ ಇದ್ದ ವೇಳೆ ಏಕಾಏಕಿ ಹೆಜ್ಜೇನುಗಳು ದಾಳಿ ನಡೆಸಿವೆ. ಮಕ್ಕಳು ಚಲ್ಲಾಪಿಲ್ಲಿಯಾಗಿ ಓಡಿದ್ದು, ಈ ಮಧ್ಯೆ ಹಲವರಿಗೆ ಹೆಜ್ಜೇನುಗಳು ಕಚ್ಚಿವೆ. ಮಕ್ಕಳ ಅಳು ಕೇಳಿ ಸ್ಥಳೀಯರು ಶಾಲೆಗೆ ಧಾವಿಸಿದ್ದು ಮಕ್ಕಳನ್ನು ರಕ್ಷಿಸುವ ಪ್ರಯತ್ನ ನಡೆಸಿದ್ದಾರೆ. ಹಜ್ಜೇನು ಕಚ್ಚಿದ್ದರಿಂದ ಅಸ್ವಸ್ಥಗೊಂಡಿದ್ದ 10 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

 

ಶಾಲೆಯ ಸುತ್ತ ಹೆಜ್ಜೇನುಗಳು ಇನ್ನೂ ಸುತ್ತಾಡುತ್ತಿದ್ದು, ಸ್ಥಳೀಯರು ಬೆಂಕಿ ಹೊಗೆ ಹಾಕಿ ಅವುಗಳನ್ನು ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News